ಶಿವಮೊಗ್ಗ ಲೈವ್.ಕಾಂ | SAGARA NEWS | 8 NOVEMBER 2020
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಿಗಂದೂರು ದೇಗುಲದ ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರಿಂದ ಕಿಕ್ ಬ್ಯಾಕ್ ಪಡೆದಿರುವ ಆರೋಪ ನಿರಾಧಾರ. ಈ ಸಂಬಂಧ ಸಿಗಂದೂರು ದೇವಿ ಸನ್ನಿಧಿಯಲ್ಲಿ ಅವರು ಪ್ರಮಾಣ ಮಾಡಲು ಸಿದ್ದರಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗದ ನಾಗರಾಜಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಾಜಸ್ವಾಮಿ, ಬೇಳೂರು ಗೋಪಾಲಕೃಷ್ಣ ಅವರಿಗೆ ದೇವಸ್ಥಾನದಿಂದ ಕಿಕ್ ಬ್ಯಾಕ್ ಪಡೆಯುವಂತಹ ದುಸ್ಥಿತಿ ಬಂದಿಲ್ಲ ಎಂದರು.
ಆರೋಪ ಮಾಡಿದವರು ಪ್ರಮಾಣಕ್ಕೆ ಬರ್ತಾರಾ?
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಚೇತನ್ರಾಜ್ ಕಣ್ಣೂರು ಆರೋಪಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಅವರು ಇದ್ದರು. ಚೇತನ್ ರಾಜ್ ಕಣ್ಣೂರು, ಗಣೇಶ್ ಪ್ರಸಾದ್ ಸೇರಿದಂತೆ ಆರೋಪಿ ಮಾಡಿದವರೆಲ್ಲರು ಸಿಗಂದೂರಿಗೆ ಬಂದು ಪ್ರಮಾಣ ಮಾಡುತ್ತಾರಾ ಎಂದು ನಾಗರಾಜಸ್ವಾಮಿ ಸವಾಲು ಹಾಕಿದರು.
ರಮೇಶ್ ಚಂದ್ರಗುತ್ತಿ, ಯಶವಂತ ಪಣಿ, ಸೋಮಶೇಖರ್ ವೀರಾಪುರ, ಜಗದೀಶ್ ಕುರಡೇಕರ್, ಜಯರಾಮ್ ಸೂರನಗದ್ದೆ, ಕಿರಣ್ ದೊಡ್ಮನಿ, ಸುಧೀರ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]