ಶಿವಮೊಗ್ಗ ಲೈವ್.ಕಾಂ | SAGARA NEWS | 6 ಆಗಸ್ಟ್ 2020
ಶರಾವತಿ ನದಿ ನಡುವೆಯೇ ಲಾಂಚ್ ನಿಂತಿದ್ದು, ಪ್ರಾಯಣಿಕರು ಆತಂಕಕ್ಕೀಡಾಗಿದ್ದಾರೆ. ಹಸಿರುಮಕ್ಕಿ ಲಾಂಚ್ ನಡುನೀರಲ್ಲೇ ನಿಂತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾಗರದ ಹುಲಿದೇವರ ಬನದಿಂದ ಹೊಸನಗರ ತಾಲೂಕು ಕೆ.ಬಿ.ಕ್ರಾಸ್ ಸಮೀಪಕ್ಕೆ ಹಿನ್ನೀರಿನಲ್ಲಿ ಸಂಪರ್ಕ ಕಲ್ಪಿಸಲಿದೆ ಈ ಲಾಂಚ್. ನಡು ನೀರಲ್ಲೇ ಲಾಂಚ್ ನಿಂತಿದೆ. ಅಡುಗೆ ಅನಿಲ ಸಿಲಿಂಡರ್ ತುಂಬಿರುವ ವಾಹನ, ಕಾರುಗಳು, ಬೈಕುಗಳು ಲಾಂಚ್ನಲ್ಲಿವೆ. ಹಲವು ಪ್ರಯಾಣಿಕರು ಇದ್ದು ಆತಂಕಕ್ಕೀಡಾಗಿದ್ದಾರೆ.
ರಕ್ಷಣಾ ಕಾರ್ಯ ಪ್ರಗತಿಯಲ್ಲಿ
ಲಾಂಚ್ ಅನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸುವ ಪ್ರಯತ್ನ ಆರಂಭವಾಗಿದೆ. ತೆಪ್ಪದ ಮೂಲಕ ಲಾಂಚ್ಗೆ ಹಗ್ಗ ಕಟ್ಟಿ ಅದನ್ನು ದಡಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಕ್ರೇನ್ ಮೂಲಕ ಲಾಂಚ್ ಅನ್ನು ದಡಕ್ಕೆ ಎಳೆಯುವ ಯತ್ನವು ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಾಗರದಿಂದ ಕೊಲ್ಲೂರಿಗೆ ಸಂಪರ್ಕ ಕಲ್ಪಿಸು ಸಮೀಪದ ಮಾರ್ಗ ಇದಾಗಿದೆ. ಹಾಗಾಗಿ ಹೆಚ್ಚು ಪ್ರಯಾಣಿಕರು ಈ ಲಾಂಚ್ ಬಳಿಸಿ ಪ್ರಯಾಣಿಸುತ್ತಾರೆ. ಈಗ ರಕ್ಷಣಾ ಕಾರ್ಯದ ವಿಡಿಯೋ ರಿಪೋರ್ಟ್ ಇಲ್ಲಿದೆ.
https://www.facebook.com/liveshivamogga/videos/219979252648014/?t=15
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]