ಸಾಗರ : ಪಟ್ಟಣದ ಗಾಂಧಿನಗರದಲ್ಲಿರುವ ನೀರು ಶುದ್ಧೀಕರಣ ಘಟಕ – 1ರ ಫಿಲ್ಟರ್ಬೆಡ್ ನಿರ್ವಹಣೆ ಹಾಗೂ ಬದಲಾವಣೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಮಾರ್ಚ್ 5ರ ವರೆಗೆ ಕುಡಿಯುವ ನೀರು (water) ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ ನೀರು ಪೂರೈಕೆ ವ್ಯತ್ಯಯ?
ಅಣಲೆಕೊಪ್ಪ, ಬೀಡಿ ಕ್ವಾಟ್ರರ್ಸ್, ಗಣೇಶ ನಗರ, ಶ್ರೀಗಂಧ ಸಂಕೀರ್ಣ, ಕೆಳದಿ ರಸ್ತೆ, ಅಗಡಿಮಠ, ಟ್ಯಾಕ್ಸ್ ಆಫೀಸ್ ಹಿಂಭಾಗದ ಬಡಾವಣೆ, ಶಿರವಾಳ ರಸ್ತೆ, ಶ್ರೀಧರನಗರ, ಹಮಾಲಿ ಕ್ವಾಟ್ರರ್ಸ್, ಅರಮನೆಕೇರಿ, ಸುಭಾಷ್ ನಗರ, ಎಸ್.ಆರ್.ಎಸ್. ಲೇಔಟ್, ಬಿ.ಹೆಚ್.ರಸ್ತೆ ಕೆಳಭಾಗ, ಜಿ.ಪಿ.ರಸ್ತೆ ಮತ್ತು ಪೇಟೆ ಭಾಗದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಕುಡಿಯುವ ನೀರು ಶೇಖರಿಸಿ ಇರಿಸಿಕೊಳ್ಳಲು ತಿಳಿಸಲಾಗಿದೆ.
ಇದನ್ನೂ ಓದಿ » ಆನಂದಪುರ ಸಮೀಪ ಆಕಸ್ಮಿಕ ಬೆಂಕಿಗೆ ಮನೆ ಹಾನಿ, ವಸ್ತುಗಳು ಆಹುತಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200