ಶಿವಮೊಗ್ಗ ಲೈವ್.ಕಾಂ | SAGARA NEWS | 18 ನವೆಂಬರ್ 2021
ಬ್ಯಾಕೋಡು ಜೋಡಿ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳನ್ನ ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾಗರ ಉಪ ವಿಭಾಗದ ಹೆಚ್ಚುವರಿ ರಕ್ಷಣಾಧಿಕಾರಿ ರೋಹನ್ ಜಗದೀಶ್ ತಿಳಿಸಿದರು.
ಸಾಗರದ ನೂತನ ಎಎಸ್’ಪಿಯಾಗಿ ಅಧಿಕಾರ ಸ್ವೀಕರಿಸಿರುವ ರೋಹನ್ ಜಗದೀಶ್ ಅವರು, ಪತ್ರಕರ್ತರೊಂದಿಗೆ ಮಾತನಾಡಿದರು. ಬ್ಯಾಕೋಡು ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಸ್ವಿಕರಿಸಿದ್ದೇವೆ. ಕೊಲೆಗಾರರನ್ನು ಹಿಡಿಯಲು ಶಕ್ತಿಮೀರಿ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಒಂದೇ ಒಂದು ಲೈಕ್’ನಿಂದ ಕಪ್ಪುಚುಕ್ಕೆ
ಸೈಬರ್ ಅಪರಾಧಗಳ ಕುರಿತು ಯುವ ಜನರು ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಸೇರಿದಂತೆ ಇನ್ನಿತರೆ ಮಾಹಿತಿ ಹಂಚಿಕೊಳ್ಳುವಾಗ ಜಾಗೃತರಾಗಿರಬೇಕು. ಒಂದು ಲೈಕ್’ಗಾಗಿ ಸಣ್ಣ ತಪ್ಪು ಮಾಡಿದರೆ ಭವಿಷ್ಯದ ಮೇಲೆ ಕಪ್ಪು ಚುಕ್ಕೆ ಬರಲಿದೆ ಎಂದು ರೋಹನ್ ಜಗದೀಶ್ ಎಚ್ಚರಿಸಿದರು.
ನೈತಿಕ ಪೊಲೀಸ್’ಗಿರಿ, ಕೋಮು ಸೌರ್ಹಾದತೆಗೆ ಧಕ್ಕೆ ತರಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಾದಕ ವಸ್ತು ಸೇವನೆ ನಿಯಂತ್ರಣಕ್ಕೆ ಇಲಾಖೆ ಕ್ರಮ ಕೈಗೊಳ್ಳಲ್ಲಿದೆ. ಈ ಕುರಿತು ಯಾವುದೆ ಮಾಹಿತಿ ಇದ್ದರೂ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ ಎಂದು ರೋಹನ್ ಜಗದೀಶ್ ತಿಳಿಸಿದರು. ಅಲ್ಲದೆ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವತ್ತ ನಿಗಾ ವಹಿಸಲಾಗುತ್ತದೆ ಎಂದರು.