ಸಿಗಂದೂರಿನಲ್ಲಿ 2 ದಿನ ಜಾತ್ರೆ, ಏನೆಲ್ಲ ಪೂಜೆಗಳು, ಯಾವೆಲ್ಲ ಕಾರ್ಯಕ್ರಮಗಳಿರಲಿವೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS |10 JANUARY 2023

ಸಾಗರ : ಪ್ರಸಿದ್ಧ ಕ್ಷೇತ್ರ ಸಿಗಂದೂರು (sigandur) ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಸಂಕ್ರಾಂತಿ  (sankranti) ಅಂಗವಾಗಿ ಜ.14 ಮತ್ತು 15ರಂದು ಜಾತ್ರಾ (jatre) ಮಹೋತ್ಸವ ನಡೆಯಲಿದೆ. ಜ.14ರಂದು ಬೆಳಗ್ಗೆ ಸೀಗೆಕಣಿವೆಯಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅವರು ಜಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಧರ್ಮದರ್ಶಿ ಡಾ. ಎಸ್.ರಾಮಪ್ಪ (dr. ramappa) ತಿಳಿಸಿದ್ದಾರೆ.

Sigandur Temple Dharmadarshi Ramappa

ಮೂಲ ಸ್ಥಳದಲ್ಲಿ ಪ್ರಥಮ ಪೂಜೆ

ಜ.14ರಂದು ಬೆಳಗಿನ ಜಾವ 2 ಗಂಟೆಗೆ ಆಲಯ ಶುದ್ಧಿ ನಡೆಯಲಿದೆ. ಬೆಳಗ್ಗೆ 7ಕ್ಕೆ ಚೌಡೇಶ್ವರಿ ದೇವಿಯ ಮೂಲ ಸ್ಥಳವಾದ ಸೀಗೆ ಕಣವೆಯಲ್ಲಿ ಪ್ರಥಮ ಪೂಜೆ ನೆರವೇರಲಿದೆ. ಬಳಿಕ ಧರ್ಮಾಧಿಕಾರಿ ನೇತೃತ್ವದಲ್ಲಿ ಪೂರ್ಣ ಕುಂಭ ಕಳಶದೊಂದಿಗೆ ಜ್ಯೋತಿ ರೂಪದ ದೇವಿಯನ್ನು ಈಗಿನ ಸಿಗಂದೂರು (sigandur) ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತರಲಾಗುತ್ತದೆ. ವಡನ್ ಬೈಲು ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ವೀರರಾಜಯ್ಯ ಜೈನ್ ಅವರು ಜಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಪೂಜೆ, ಧಾರ್ಮಿಕ ಸಭೆ, ಯಕ್ಷಗಾನ

ಜ.14ರಂದು ದೇವಿಗೆ ಹೂವಿನ ಅಲಂಕಾರ, ಪೂಜೆ, ಮಹಾಭಿಷೇಕ, ಆಭರಣ ಪೂಜೆ, ಚಂಡಿಕಾ ಹವನ, ನವ ಚಂಡಿಕಾ ಹವನ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಧಾರ್ಮಿಕ ಸಭೆ ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 5.30ಕ್ಕೆ ಗಂಗಾರತಿ, ಸಿಡಿಮದ್ದು ಪ್ರದರ್ಶನವಿರಲಿದೆ. ರಾತ್ರಿ 10.30ರಿಂದ ಯಕ್ಷಗಾನ ಪ್ರದರ್ಶನವಿರಲಿದೆ.

Shimoga Live News Reach 3 Million Views

ಮುಂಜಾನೆಯಿಂದಲೆ ವಿಶೇಷ ಪೂಜೆ

ಜ.15ರಂದು ಮುಂಜಾನೆ 4 ಗಂಟೆಯಿಂದಲೇ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8ಕ್ಕೆ ಗಾನ ವೈಭವ ನಡೆಯಲಿದೆ. ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಧರ್ಮದರ್ಶಿ ಡಾ.ರಾಮಪ್ಪ  ಅವರು ತಿಳಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ವೈಭವದ ತೆಪ್ಪೋತ್ಸವ, ಕಣ್ತುಂಬಿಕೊಂಡು ಪುನೀತರಾದ ಭಕ್ತ ಸಮೂಹ, ಮೆರಗು ಹೆಚ್ಚಿಸಿದ ಸಿಡಿಮದ್ದು

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment