ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019
ತೀವ್ರ ಕುತೂಹಲ ಕೆರಳಿಸಿದ್ದ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕೇವಲ ಒಂದು ಸ್ಥಾನ ಗಳಿಸಿ ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸಿದೆ.

ಕಾರ್ಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು 11 ಸ್ಥಾನದ ಪೈಕಿ ಬಿಜೆಪಿ 9, ಕಾಂಗ್ರೆಸ್ 1 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದಾರೆ. ಇಲ್ಲಿ ಜೆಡಿಎಸ್ ಪಕ್ಷ ಖಾತೆಯನ್ನೆ ತೆರೆದಿಲ್ಲ.
ಯಾವ್ಯಾವ ವಾರ್ಡ್’ನಲ್ಲಿ ಯಾರೆಲ್ಲ ಗೆದ್ದಿದ್ದಾರೆ?
ವಾರ್ಡ್ 1 : ಬಿಜೆಪಿಯ ನಾಗರಾಜ ವಾಟೇಮಕ್ಕಿ ಅವರಿಗೆ ಕಾಂಗ್ರೆಸ್’ನ ಕೆ.ಕಮಲಾಕರ್ ಅವರ ವಿರುದ್ಧ 137 ಮತಗಳ ಅಂತರದಲ್ಲಿ ಗೆಲುವು
ವಾರ್ಡ 2 : ಬಿಜೆಪಿಯ ಮಂಜುನಾಥ್ ಅವರಿಗೆ ಕಾಂಗ್ರೆಸ್’ನ ಸಂತೋಷ್ ಕುಮಾರ್ ಅವರ ವಿರುದ್ಧ 23 ಮತಗಳ ಅಂತರದ ಗೆಲುವು
ವಾರ್ಡ್ 3 : ಬಿಜೆಪಿಯ ಲಲಿತಾ ಅವರಿಗೆ ಕಾಂಗ್ರೆಸ್’ನ ಗೀತಾ ಅವರ ವಿರುದ್ಧ 8 ಮತಗಳ ಅಂತರದ ಗೆಲುವು
ವಾರ್ಡ್ 4 : ಕಾಂಗ್ರೆಸ್’ನ ರಾಜು ಅವರಿಗೆ ಬಿಜೆಪಿಯ ಶಿವಮಣಿ ಅವರ ವಿರುದ್ಧ 36 ಮತಗಳ ಅಂತರದಲ್ಲಿ ಗೆಲುವು
ವಾರ್ಡ್ 5 : ಬಿಜೆಪಿಯ ವಾಸಂತಿ ಅವರಿಗೆ ಕಾಂಗ್ರೆಸ್’ನ ದಾಕ್ಷಾಯಿಣಿ ಅವರ ವಿರುದ್ಧ 64 ಮತಗಳ ಅಂತರದ ಗೆಲುವು

ವಾರ್ಡ್ 6 : ಬಿಜೆಪಿಯ ಉಮೇಶ್ ಅವರಿಗೆ ಕಾಂಗ್ರೆಸ್’ನ ವಿಜಯ ಕುಮಾರ್ ವಿರುದ್ಧ 224 ಮತಗಳ ಅಂತರದ ಗೆಲುವು
ವಾರ್ಡ್ 7 : ಬಿಜೆಪಿಯ ಬಾಲಸುಬ್ರಹ್ಮಣ್ಯಂ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿ ರಾಜಕುಮಾರ್ ಅವರ ವಿರುದ್ಧ 133 ಮತಗಳ ಅಂತರದ ಗೆಲುವು
ವಾರ್ಡ್ 8 : ಸ್ವತಂತ್ರ ಅಭ್ಯರ್ಥಿ ಹರೀಶ್ ಗೌಡ ಅವರಿಗೆ ಬಿಜೆಪಿಯ ಸತೀಶ ಫಿಲಿಪೋಸೆ ವಿರುದ್ಧ 11 ಮತಗಳ ಅಂತರದ ಗೆಲುವು
ವಾರ್ಡ್ 9 : ಬಿಜೆಪಿಯ ಲಕ್ಷ್ಮಿ ಅವರಿಗೆ ಸ್ವತಂತ್ರ ಅಭ್ಯರ್ಥಿ ಪುಷ್ಪ ಸಿದ್ದಣ್ಣ ಅವರ ವಿರುದ್ಧ 117 ಮತಗಳ ಅಂತರದ ಗೆಲುವು
ವಾರ್ಡ್ 10 : ಬಿಜೆಪಿಯ ಜಯಲಕ್ಷ್ಮಿ ಅವರಿಗೆ ಸ್ವತಂತ್ರ ಅಭ್ಯರ್ಥಿ ಜ್ಯೋತಿ ಅವರ ವಿರುದ್ಧ 5 ಮತಗಳ ಅಂತರದ ಗೆಲುವು
ವಾರ್ಡ್ 11 : ಬಿಜೆಪಿಯ ಸುಜಾತಾ ಜೈನ್ ಅವರಿಗೆ ಕಾಂಗ್ರೆಸ್’ನ ಸುಮಿತ್ರಾ ಅವರ ವಿರುದ್ಧ 143 ಮತಗಳ ಅಂತರದ ಗೆಲುವು

ಮಾವ ಅಳಿಯನಿಗೆ ಸೋಲು
ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯ ಮೊದಲ ವಾರ್ಡ್’ನಲ್ಲಿ ಮಾವ ಅಳಿಯನ ನಡುವೆ ತೀವ್ರ ಜಿದ್ದಾಜಿದ್ದಿ ಇತ್ತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಕಮಲಾಕರ್ ಮತ್ತು ಹೋರಾಟಗಾರ ರಾಮಪ್ಪ ಅವರು ಸಂಬಂಧದಲ್ಲಿ ಮಾವ ಅಳಿಯ. ಮತ ಎಣಿಕೆಯಲ್ಲಿ ಕೆಮಲಾಕರ್ ಅವರಿಗೆ 126 ಮತ್ತು ರಾಮಪ್ಪ ಅವರು 14 ಮತಗಳು ಪಡೆದು ಇಬ್ಬರು ಸೋಲನುಭವಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ನಾಗರಾಜ್ ವಾಟೇಮಕ್ಕಿ ಗೆಲುವು ಸಾಧಿಸಿದ್ದಾರೆ.

ಅಕ್ಕ, ತಂಗಿಯ ಫೈಟ್
ಪಟ್ಟಣ ಪಂಚಾಯಿತಿ ಐದನೇ ವಾರ್ಡ್’ನಲ್ಲಿ ಅಕ್ಕ ತಂಗಿ ನಡುವೆ ಫೈಟ್ ಇತ್ತು. ಆಟೋರಿಕ್ಷ ಚಿನ್ನೆ ಅಡಿ ಸ್ಪರ್ಧಿಸಿದ್ದ ಶ್ರೀರತ್ನ ಮತ್ತು ಹೊಲಿಗೆ ಯಂತ್ರಿ ಚಿನ್ನೆಯಡಿ ಶ್ರೀಲತಾ ಸತ್ಯನಾಯರ್ ಸ್ಪರ್ಧಿಸಿದ್ದರು. ಮತ ಎಣಿಕೆಯಲ್ಲಿ ಶ್ರೀರತ್ನ ಅವರು 33 ಮತ್ತು ಶ್ರೀಲತಾ ನಾಯರ್ ಅವರು 23 ಮತಗಳನ್ನು ಪಡೆದಿದ್ದಾರೆ. ಸಹೋದರಿಯರು ಸೋತಿದ್ದು. ಬಿಜೆಪಿಯ ವಾಸಂತಿ 211 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಲ್ಲಿ ಅರಳಿದ ಕಮಲ
2001ರಲ್ಲಿ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಯಿತು. ಆ ನಂತರ ನಡೆದ ಮೂರು ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಇಲ್ಲಿ ಗೆಲುವು ಸಾಧಿಸಿ, ಭದ್ರಕೋಟೆ ನಿರ್ಮಿಸಿಕೊಂಡಿತ್ತು. ಆದರೆ ನಾಲ್ಕನೆ ಚುನಾವಣೆಯಲ್ಲಿ ಈ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ. ಒಂದು ಸ್ಥಾನಕ್ಕಷ್ಟೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಪಾಳಯಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ.

ಹೇಗಿತ್ತು ಮತ ಎಣಿಕೆ ಕಾರ್ಯ?
ಮತ ಎಣಿಕೆಗೆ 20 ಜನ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಮೂರು ಟೇಬಲ್’ನಲ್ಲಿ 4 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಇನ್ನು, ಪಟ್ಟಣ ಪಂಚಾಯಿತಿ ಚುನಾವಣೆ ಮತ ಎಣಿಕೆ ಹಿನ್ನೆಲೆ ಎಣಿಕೆ ಕೇಂದ್ರದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 25 ಪೊಲೀಸ್ ಇಬ್ಬಂದಿಗಳನ್ನು ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com




