SHIVAMOGGA LIVE NEWS, 19 DECEMBER 2024
ಸಾಗರ : ಕೆಎಸ್ಆರ್ಟಿಸಿ ಬಸ್ (Bus) ನಿಲುಗಡೆ ಮಾಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಸಾಗರ ತಾಲೂಕು ತಾಲ್ಲೂಕಿನ ಕಾನ್ಲೆ ಮಾರ್ಗದಲ್ಲಿ ಸಾಗರಕ್ಕೆ ಸಂಚರಿಸುವ ಬಸ್ಗಳು ನಿಲುಗಡೆ ನೀಡದಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಕಾನ್ಲೆ ಮಾರ್ಗವಾಗಿ ಸಾಗರಕ್ಕೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳನ್ನು ಎಲ್ಲಾ ಕಡೆ ನಿಲುಗಡೆ ಮಾಡಬೇಕು. ಈ ಬಸ್ನಲ್ಲಿ ವಿದ್ಯಾರ್ಥಿಗಳು ಸಿರಿವಂತೆ, ಸಾಗರದ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಬಸ್ ನಿಲುಗಡೆ ಮಾಡದೆ ಇರುವುದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ಇದನ್ನೂ ಓದಿ » ಆನಂದಪುರದಲ್ಲಿ ಎಲ್ಇಡಿ ಟಿವಿ, ಹೋಂ ಥಿಯೇಟರ್ ಕಳ್ಳತನ, ಹೇಗಾಯ್ತು ಘಟನೆ?
ಸ್ಥಳಕ್ಕೆ ಬಂದ ಕೆಎಸ್ಆರ್ಟಿಸಿ ಅಧಿಕಾರಿಗಳು ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಶೋಕ್ ಬರದವಳ್ಳಿ, ಪ್ರಮುಖರಾದ ತುಕಾರಾಮ್ ಶಿರವಾಳ, ಶಿವಮೂರ್ತಿ ಮಂಡಗಳಲೆ, ಅಣ್ಣಪ್ಪ ಕಾನ್ಲೆ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ » ದೇವರ ದರ್ಶನ ಮುಗಿಸಿ ಭದ್ರಾವತಿಯಲ್ಲಿ ಮನೆಗೆ ಮರಳಿದ ಕುಟುಂಬಕ್ಕೆ ಕಾದಿತ್ತು ಶಾಕ್