ಕರೋನ ಭೀತಿಯ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್​​ಡಿ ಆತಂಕ ಶುರು, ಸಾಗರದ ಯುವಕನಿಗೆ ಪಾಸಿಟಿವ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SAGARA NEWS | 4 MAY 2021

ಕರೋನ ಭೀತಿ ನಡುವೆ ಜಿಲ್ಲೆಯಲ್ಲಿ ಕ್ಯಾಸನೂರು ಫಾರೆಸ್ಟ್‍ ಡಿಸೀಸ್ (ಕೆಎಫ್‍ಡಿ) ಆತಂಕ ಶುರುವಾಗಿದೆ. ಸಾಗರ ತಾಲೂಕಿನ ಯುವಕನೊಬ್ಬನಿಗೆ ಕೆಎಫ್‍ಡಿ ಪಾಸಿಟಿವ್ ಬಂದಿದೆ.

ಸಾಗರ ತಾಲೂಕು ತ್ಯಾಗರ್ತಿ ಸಮೀಪದ ಬರೂರು ಬಳಿಯ ಮತ್ತಲಬೈಲಿನ ದೀಪಕ್ (18) ಎಂಬುವವರಿಗೆ ಕೆಎಫ್‍ಡಿ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದ ದೀಪಕ್, ಲಾಕ್‍ಡೌನ್ ಹಿನ್ನೆಲೆ ಊರಿಗೆ ಮರಳಿದ್ದರು. ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದೆ.

ತಾಲೂಕು ಉಪ ವಿಭಾಗೀಯ ಆಸ್ಪತ್ರೆಯಲ್ಲಿ ದೀಪಕ್‍ಗೆ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಲು ವೈದ್ಯರು ಸೂಚಿಸಿದ್ದಾರೆ.

ಕೆಎಫ್‍ಡಿ ಆತಂಕ ಶುರು

ಎರಡು ವರ್ಷದ ಹಿಂದೆ ಕೆಎಫ್‍ಡಿಯಿಂದ ತಾಲೂಕಿನಲ್ಲಿ ದೊಡ್ಡ ಮಟ್ಟದ ಸಾವು ಸಂಭವಿಸಿತ್ತು. ಈಗ ಮತ್ತೊಮ್ಮೆ ಕೆಎಫ್‍ಡಿ ಆತಂಕ ಶುರುವಾಗಿದೆ. ತಾಲೂಕಿನಲ್ಲಿ ಈವರೆಗೆ 1548 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ 15 ದಿನದಿಂದ ಪರೀಕ್ಷಾ ಕಾರ್ಯ ನಡೆಯುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಎಸ್.ಮೋಹನ್ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment