ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 DECEMBER 2022
ಸಾಗರ : ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯೊಬ್ಬನ ಮೇಲೆ ಲೋಕಾಯುಕ್ತ ದಾಳಿಯಾಗಿದೆ (lokayuktha raid). ಸರ್ವೆಯರ್ ರಂಗನಾಥ್ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಾಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸರ್ವೇಯರ್ ರಂಗನಾಥ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಗುರುವಾರ ಸಂಜೆ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
(lokayuktha raid)
ಮೊದಲು 500 ರೂ. ಪಡೆದಿದ್ದ
ಸಾಗರದಲ್ಲಿ ಹಾರ್ಡ್ ವೇರ್ ಶಾಪ್ ನಡೆಸುತ್ತಿರುವ ಉಮೇಶ್ ಅವರ ತಾಯಿ ಹೆಸರಿನಲ್ಲಿ ತ್ಯಾಗರ್ತಿಯಲ್ಲಿ ಸೈಟ್ ಇದೆ. ಅದಕ್ಕೆ ಈ ಸ್ವತ್ತು ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ 800 ರೂ.ಗಳನ್ನು ಕಟ್ಟಿದ್ದರು. ಇದರ ಕಡತ ಸರ್ವೇಯರ್ ರಂಗನಾಥ್ ಅವರ ಬಳಿ ಇತ್ತು. ಆ ಸೈಟಿನ ಸರ್ವೆ ಮಾಡಲು ಸರ್ವೇಯರ್ ರಂಗನಾಥ್ 5 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಉಮೇಶ್ ತಮ್ಮ ಬಳಿ ಇದ್ದ 500 ರುಪಾಯಿಯನ್ನು ರಂಗನಾಥ್ ಗೆ ಕೊಟ್ಟಿದ್ದರು.
(lokayuktha raid)
ಮೊಬೈಲ್ ನಲ್ಲಿ ರೆಕಾರ್ಡ್ ಆಗಿತ್ತು
ಸರ್ವೆ ಮಾಡುವ ಕುರಿತು ಉಮೇಶ್ ಅವರು ಡಿ.6ರಂದು ರಂಗನಾಥ್ ಗೆ ಕರೆ ಮಾಡಿದ್ದರು. ಆಗ ಉಮೇಶ್ ಅವರನ್ನು ತನ್ನ ಮನೆಗೆ ಕರೆಯಿಸಿಕೊಂಡ ರಂಗನಾಥ್, ‘5 ಸಾವಿರ ಅಲ್ಲದಿದ್ದರೆ 3 ಸಾವಿರ ರೂ. ಕೊಡುವಂತೆ’ ಸೂಚಿಸಿದ್ದಾನೆ ಎಂದು ಲೋಕಾಯುಕ್ತ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ವೇಳೆ ರಂಗನಾಥ್ ಬಳಿ 1 ಸಾವಿರ ರೂ. ಹಣವಿತ್ತು. ಅದನ್ನು ಅವರು ರಂಗನಾಥ್ ಗೆ ಕೊಟ್ಟಿದ್ದಾರೆ. ಆಗ ರಂಗನಾಥ್ ಇನ್ನೂ 1,500 ರೂ. ಬೇಕು ಎಂದು ತಿಳಿಸಿದ್ದಾರೆ. ಉಮೇಶ್ ಅವರು ಇದನ್ನೆಲ್ಲ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು.
(lokayuktha raid)
ಪ್ರಕರಣ ದಾಖಲಿಸಿಕೊಂಡು ದಾಳಿ
ಉಮೇಶ್ ಅವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋವನ್ನು ಲೋಕಯುಕ್ತ ಅಧಿಕಾರಿಗಳಿಗೆ ತೋರಿಸಿದ್ದರು. ಲಂಚ ಪಡೆದಿರುವುದು ಮತ್ತು ಹೆಚ್ಚುವರಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮೊಬೈಲ್ ವಿಡಿಯೋದಿಂದ ಸಾಬೀತಾಗಿತ್ತು. ಈ ಹಿನ್ನೆಲೆ ಸರ್ವೇಯರ್ ರಂಗನಾಥ್ ವಿರುದ್ಧ ಶಿವಮೊಗ್ಗ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಯಿತು.
ಗುರುವಾರ ಸಂಜೆ ಸಾಗರದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ, ಸರ್ವೇಯರ್ ರಂಗನಾಥ್ ಗೆ ಉಮೇಶ್ ಅವರು 1500 ರೂ. ಲಂಚ ಕೊಟ್ಟಿದ್ದಾರೆ. ಆಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ರಂಗನಾಥ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಣವನ್ನು ವಶಕ್ಕೆ ಪಡೆದು, ರಂಗನಾಥ್ ನನ್ನು ಬಂಧಿಸಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಯಿತು. ಲೋಕಾಯುಕ್ತ ಡಿ.ವೈ.ಎಸ್.ಪಿ ಮೃತ್ಯುಂಜಯ, ಇನ್ಸ್ ಪೆಕ್ಟರ್ ಹೆಚ್.ರಾಧಾಕೃಷ್ಣ, ಸಿಬ್ಬಂದಿ ಎಸ್.ಕೆ.ಪ್ರಸನ್ನ, ವಿ.ಎ.ಮಹಾಂತೇಶ, ಬಿ.ಲೋಕೇಶಪ್ಪ, ಸಾವಿತ್ರಮ್ಮ, ಪುಟ್ಟಮ್ಮ, ಚನ್ನೇಶ, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ತರುಣ್ ಕುಮಾರ್, ಪ್ರದೀಪ್, ಬಿ.ಕೆ.ಗಂಗಾಧರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ದರೋಡೆಗೆ ಪ್ಲಾನ್, ತಲ್ವಾರ್, ರಾಡ್, ಖಾರದ ಪುಡಿ ಸಹಿತ ಸಿಕ್ಕಿಬಿದ್ದ ಟೀಮ್