ಶಿವಮೊಗ್ಗ ಲೈವ್.ಕಾಂ | SAGARA NEWS | 25 ಆಗಸ್ಟ್ 2020
ಕೋರಂ ಕೊರತೆಯಿಂದಾಗಿ ಸಾಗರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಮತ್ತೆ ಮುಂದಕ್ಕೆ ಹೋಗಿದೆ. ಸೆಪ್ಟಂಬರ್ 3ರಂದು ಸಾಮಾನ್ಯ ಸಭೆಗೆ ದಿನಾಂಕ ನಿಗದಿಯಾಗಿದೆ.
ಇವತ್ತು ಸಭೆಯಲ್ಲಿ ಯಾರೆಲ್ಲ ಇದ್ದರು?
ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಅಶೋಕ ಬರದವಳ್ಳಿ, ಸದಸ್ಯರಾದ ಆನಂದಿ ಲಿಂಗರಾಜ್, ಹೇಮಾ ರಾಜಪ್ಪ, ಸವಿತಾ ದೇವರಾಜ್ ಅವರು ಭಾಗವಹಿಸಿದ್ದರು. 15 ಸದಸ್ಯ ಬಲದ ತಾಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಐವರು ಮಾತ್ರ ಸಭೆಯಲ್ಲಿದ್ದರು. ಕೋರಂ ಕೊರತೆಯಿಂದಾಗಿ ಸಭೆಯನ್ನು ಮುಂದೂಡಲಾಗಿದೆ ಎಂದು ಇಒ ಪುಷ್ಪಾ ಎಂ.ಕಮ್ಮಾರ್ ತಿಳಿಸಿದರು
ಕೋರಂ ಕೊರತೆಯಾಗಿದ್ದು ಯಾಕೆ?
ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರ ವಿರುದ್ಧ ಅವಿಶ್ವಾಸವಿದ್ದರೂ ಅವರು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಮಲ್ಲಿಕಾರ್ಜುನ ಹಕ್ರೆ ಪದತ್ಯಾಗ ಮಾಡಬೇಕು ಎಂದು ಉಳಿದ ಸದಸ್ಯರು ಒತ್ತಾಯಿಸಿದ್ದರು. ಈ ಸಂಬಂಧ ಪ್ರತಿಭಟನೆಗಳು, ಅಧ್ಯಕ್ಷರ ಕೊಠಡಿಗೆ ಬೀಗ ಹಾಕುವ ಪ್ರಹಸನಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಉಳಿದ ಸದಸ್ಯರು ಸಾಮಾನ್ಯ ಸಭೆಗೆ ಗೈರಾಗಿದ್ದಾರೆ.
ಅಧ್ಯಕ್ಷರು ಹೇಳಿದ್ದು ಏನು?
ಈ ಕುರಿತು ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಶಾಸಕ ಹರತಾಳು ಹಾಲಪ್ಪ ಅವರದ್ದು ಚಕ್ರವರ್ತಿ ಮನಸ್ಥಿತಿ. ಮೊದಲಿಂದಲೂ ತಾಲೂಕು ಪಂಚಾಯಿತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಕಾನೂನುಗಳನ್ನು ಗಾಳಿಗೆ ತೂರಿ ತಾವು ಹೇಳಿದ್ದೆ ಶಾಸನವಾಗಬೇಕು ಎಂದುಕೊಂಡಿದ್ದಾರೆ ಎಂದು ಆರೋಪಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]