ಶಿವಮೊಗ್ಗ ಲೈವ್.ಕಾಂ | SAGARA NEWS | 15 ಅಕ್ಟೋಬರ್ 2020
ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯ ಹಿನ್ನೆಲೆ, ಡ್ಯಾಂಗೆ ಒಳಹರಿವು ಹೆಚ್ಚಳವಾಗಿದೆ. ಜಲಾಶಯದಿಂದ ಯಾವುದೆ ಸಂದರ್ಭದಲ್ಲಿ ನೀರು ಹೊರ ಬಿಡುವ ಸಾದ್ಯತ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ನದಿ ಪಾತ್ರದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾರ್ಗಲ್ ಸುತ್ತಮುತ್ತ ಪೊಲೀಸರು ಮತ್ತು ವಿದ್ಯುತ್ ನಿಗಮದ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಜೀಪ್‍ಗೆ ಮೈಕ್ ಕಟ್ಟಿಕೊಂಡು ಗ್ರಾಮಗಳಿಗೆ ತೆರಳುತ್ತಿರುವ ಅಧಿಕಾರಿಗಳು, ನದಿ ಪಾತ್ರಕ್ಕೆ ಹೋಗದಂತೆ, ಜಾನುವಾರುಗಳನ್ನು ನದಿ ಬಳಿಗೆ ಬಿಡದಂತೆ ಎಚ್ಚರಿಸುತ್ತಿದ್ದಾರೆ.
ವಿಡಿಯೋ ರಿಪೋರ್ಟ್ ಇಲ್ಲಿದೆ
https://www.facebook.com/liveshivamogga/videos/3712315875445275/?t=8
ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು ಬೆಳಗ್ಗೆ 50531 ಕ್ಯೂಸೆಕ್ ಒಳಹರಿವು ಇತ್ತು. ಮಧ್ಯಾಹ್ನ 1 ಗಂಟೆ ಹೊತ್ತಿಗೆ 36137 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಎರೆಡು ಗಂಟೆಗೆ 30464 ಕ್ಯೂಸೆಕ್ ಒಳ ಹರಿವು ಇತ್ತು. ಈಗ ನೀರನ ಒಳಹರಿವು ತಗ್ಗಿದೆ. ಆದರೆ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಳವಾದರೆ, ಜಲಾಶಯ ಭರ್ತಿಯಾಗಿ ನೀರು ಹೊರ ಬಿಡುವ ಸಾದ್ಯತೆ ಇದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]