SHIVAMOGGA LIVE NEWS | 20 JANUARY 2023
SAGARA : ಅಬಕಾರಿ ಇಲಾಖೆ (Excise Department) ಅಧಿಕಾರಿಗಳು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದು ತಪಾಸಣೆ (checking) ನಡಸಿದಾಗ ಗಾಂಜಾ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಸವಾರ ಗಾಂಜಾ ಸೇವನೆ ಮಾಡಿರುವುದು ಗೊತ್ತಾಗಿದ್ದು, ವೈದ್ಯಕೀಯ ತಪಾಸಣೆ ಬಳಿಕ ಬಂಧಿಸಿದ್ದಾರೆ.
ಸೊರಬ ತಾಲೂಕು ಗಣಪತಿ ಬಂಧಿತ. ಸಾಗರ ತಾಲೂಕು ಸೂರಗುಪ್ಪ ಬಸ್ ನಿಲ್ದಾಣದ ಬಳಿ ಗಣಪತಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಪಾಸಣೆ (checking) ಮಾಡಿದ್ದಾರೆ. ಆತನ ಬಳಿ ಇದ್ದ ಪ್ಲಾಸ್ಟಿಕ್ ಕವರ್ ತಪಾಸಣೆ ಮಾಡಿದಾಗ ಸುಮಾರು 500 ಗ್ರಾಂ ಗಾಂಜಾ ಸಿಕ್ಕಿದೆ. ಇನ್ನು ಗಣಪತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗಣಪತಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆತನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ – ಮೈಸೂರು – ಶಿವಮೊಗ್ಗ, ತಾಳಗುಪ್ಪ – ಮೈಸೂರು 2 ರೈಲುಗಳು 4 ದಿನ ಮಾರ್ಗ ಮಧ್ಯೆ ಕೆಲ ಹೊತ್ತು ನಿಯಂತ್ರಣ, ಕಾರಣವೇನು?