ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA | 8 ಅಕ್ಟೋಬರ್ 2019
22 ವರ್ಷದ ಬಳಿಕ ಶಕ್ತಿಶಾಲಿ ಪಚ್ಚೆಲಿಂಗದ ಸಾರ್ವಜನಿಕ ದರ್ಶನ. ಅಪರೂಪದ ಲಿಂಗ ದರ್ಶನಕ್ಕೆ ಹರಿತು ಬಂದು ಭಕ್ತ ಸಾಗರ.
ಸಾಗರ ತಾಲೂಕಿನ ಕೆಳದಿ ರಾಜಗುರು ಬಂದಗದ್ದೆ ಹಿರೇಮಠದಲ್ಲಿ ವಿಜಯ ದಶಮಿಯಂದು ಅಪರೂಪದ, ಶಕ್ತಿಶಾಲಿ ಪಚ್ಚೆ ಲಿಂಗದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 22 ವರ್ಷದ ಬಳಿಕ ದರ್ಶನಕ್ಕೆ ವ್ಯವಸ್ಥೆ ಮಾಡಿರುವುದರಿಂದ ಮಠಕ್ಕೆ ಭಾರಿ ಭಕ್ತರು ಆಗಮಿಸುತ್ತಿದ್ದಾರೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಭದ್ರತೆ ನಿಯೋಜಿಸಲಾಗಿದೆ.
ಸಂಜೆವರೆಗೆ ನಡೆಯಲಿದೆ ದರ್ಶನ
ಸಾಗರದ ಉಪ ಖಜಾನೆಯಲ್ಲಿದ್ದ ಪಚ್ಚೆ ಲಿಂಗವನ್ನು ಬೆಳಗ್ಗೆ ಕೆಳದಿ ರಾಜಗುರು ಬಂದಗದ್ದೆ ಹಿರೇಮಠಕ್ಕೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು. ಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಅಲಂಕಾರ ಮಾಡಿ, ಅಭಿಷೇಕ ಮತ್ತು ಪೂಜೆ ನೆರವೇರಿಸಿದರು. ಸಂಜೆವರೆಗೆ ಸಾರ್ವಜನಿಕ ದರ್ಶನವಿರಲಿದೆ. ಬಳಿಕ ಪಚ್ಚೆ ಲಿಂಗವನ್ನು ಪೊಲೀಸ್ ಭದ್ರತೆಯಲ್ಲಿ ಶಿವಮೊಗ್ಗದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್’ಗೆ ತಂದು ಇಡಲಾಗುತ್ತದೆ.
ಸಿಎಂ ಮಧ್ಯಸ್ಥಿಕೆಯಿಂದ ದರ್ಶನಕ್ಕೆ ಅವಕಾಶ
ಶಕ್ತಿಶಾಲಿ ಪಚ್ಚೆಲಿಂಗಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಮಠದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ, ಹಿಂದಿನ ಸ್ವಾಮೀಜಿ ಅವರು, ಪಚ್ಚೆಲಿಂಗವನ್ನು ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿದ್ದ ಸ್ಟೇಟ್ ಬ್ಯಾಂಕ್ ಮೈಸೂರಿನಲ್ಲಿ ಇರಿಸಿ ಸಾಲ ಪಡೆದಿದ್ದರು. ಪಚ್ಚೆಲಿಂಗ ಸೇಫ್ ಲಾಕರ್ ಸೇರಿದಾಗಿನಿಂದ ಸಾರ್ವಜನಿಕ ದರ್ಶನ ನಿಂತು ಹೋಗಿತ್ತು. ಇತ್ತೀಚೆಗೆ ಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ವಿಜಯದಶಮಿಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಹರತಾಳು ಹಾಲಪ್ಪ ಅವರಲ್ಲಿ ಮನವಿ ಮಾಡಿದ್ದರು.
ಪಚ್ಚೆಲಿಂಗದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕ ಹರತಾಳು ಹಾಲಪ್ಪ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಕೂಡಲೆ ಪಚ್ಚೆಲಿಂಗದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗೆ ಸಿಎಂ ಸೂಚನೆ ನೀಡಿದ್ದರು. ಅದರಂತೆ ಇವತ್ತು ಬೆಳಗ್ಗೆಯಿಂದ ಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422