ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2020
ವಿವಸ್ತ್ರಳಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬರಿಗೆ ಎಎಸ್‍ಐ ಒಬ್ಬರು ಬಟ್ಟೆ ತೊಡಿಸಿ, ಊಟ ಮಾಡಿಸಿ, ಊರಿಗೆ ಬಸ್ಸು ಹತ್ತಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಎಸ್ಐ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಳಗುಪ್ಪದಲ್ಲಿ ಮಹಿಳೆಯೊಬ್ಬರು ಬಟ್ಟೆ ಇಲ್ಲದೆ ಓಡಾಡುತ್ತಿದ್ದರು. ಬಕ್ರಿದ್ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಎಎಸ್‍ಐ ಮೀರಾಬಾಯಿ ಇದನ್ನು ಗಮನಿಸಿ, ಮಹಿಳೆಗೆ ಬಟ್ಟೆ ತೊಡಿಸಿ, ಊಟ, ತಿಂಡಿ ಕೊಡಿಸಿ, ಆಪ್ತ ಸಮಾಲೋಚನೆ ಮಾಡಿ, ಊರಿಗೆ ಕಳುಹಿಸಿದ್ದಾರೆ.
ಮಹಿಳೆ ತಮಿಳುನಾಡು ಮೂಲದವಳು ಎಂದು ತಿಳಿದು ಬಂದಿದೆ. ಆಕೆಯೊಂದಿಗೆ ಆಪ್ತವಾಗಿ ಮಾತನಾಡಿದ ಬಳಿಕ ತನ್ನ ಊರಿನ ಬಗ್ಗೆ ತಿಳಿಸಿದ್ದಾಳೆ. ಹಾಗಾಗಿ ತಾಳಗುಪ್ಪದಿಂದ ಸಾಗರದವರೆಗೆ ತಮ್ಮ ಕಾರಿನಲ್ಲೆ ಕರೆದೊಯ್ದು, ಅಲ್ಲಿ ಬೆಂಗಳೂರಿಗೆ ಬಸ್ ಹತ್ತಿಸಿದ್ದಾರೆ. ಎಎಸ್‍ಐ ಮೀರಾಬಾಯಿ ಅವರ ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಡ್ ಕಾನ್ಸ್‍ಟೇಬಲ್ ರಘು ಶೆಟ್ಟಿ, ಮಂಜುನಾಥ್, ವಿನಾಯಕ್ ಅವರು ಎಎಸ್‍ಐ ಮೀರಾಬಾಯಿ ಅವರಿಗೆ ನೆರವಾದವರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್, ಏನಿದು ಪ್ರಕರಣ?

- ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್ ಆರೋಪ, ಕಾಲೇಜು ಮುಂದೆ ಆಕ್ರೋಶ

- ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್, ಈತನ ಮೇಲಿವೆ 11 ಕೇಸ್, ಏನೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

- ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

About The Editor
ನಿತಿನ್ ಆರ್.ಕೈದೊಟ್ಲು
















