ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 DECEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SAGARA : ಶಿವಮೊಗ್ಗ – ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಗುಂಡಿಗಳು ಬಾಯ್ತೆರೆದಿವೆ. ಸ್ವಲ್ಪ ಯಾಮಾರಿದರು ವಾಹನ ಸವಾರರಿಗೆ ಪ್ರಾಣಾಪಾಯ ತಪ್ಪಿದ್ದಲ್ಲ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಎಲ್ಲೆಲ್ಲಿ ಗುಂಡಿಗಳಿವೆ?
ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುವವರಿಗೆ ಐಗಿನಬೈಲು ಸಮೀಪ ಸೇತುವೆ ಮೇಲೆ ಬೃಹತ್ ಗುಂಡಿ ಕಾಣಸಿಗುತ್ತದೆ. ಡಾಂಬರ್ ಕಿತ್ತು ಹೋಗಿದ್ದು ಸೇತುವೆಗೆ ಅಳವಡಿಸಿರುವ ಕಂಬಿಗಳು ಗೋಚರಿಸುತ್ತಿವೆ. ಇನ್ನು, ಆನಂದಪುರದಲ್ಲಿಯು ಹೆದ್ದಾರಿ ಮೇಲೆ ಗುಂಡಿಗಳಿವೆ. ಆಚಾಪುರ, ಗಿಳಾಲಗುಂಡಿ, ಕೋಣೆ ಹೊಸೂರು, ಸನ್ನಿವಾಸದ ಬಳಿ ಹೆದ್ದಾರಿಯಲ್ಲಿ ಗುಂಡಿಗಳಿವೆ. ಅದರಲ್ಲೂ ಕೋಣೆ ಹೊಸೂರು ಸಮೀಪ ಸಾಲಾಗಿ ಗುಂಡಿಗಳಿವೆ.
ಸಾಗರದಿಂದ ಐಗಿನಬೈಲು ತನಕ ಹೆದ್ದಾರಿ ಚನ್ನಾಗಿದೆ. ಇದೆ ಕಲ್ಪನೆಯಲ್ಲಿಯೇ ವಾಹನ ಸವಾರರು ವೇಗ ಹೆಚ್ಚಿಸಿದರೆ ದಿಢೀರ್ ಎದುರಾಗುವ ಗುಂಡಿಗಳು ಜೀವಕ್ಕೆ ಕುತ್ತು ತರುತ್ತವೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವು ಅಪಘಾತಗಳು ಕೂಡ ಸಂಭವಿಸಿವೆ ಅನ್ನುತ್ತಾರೆ ಸ್ಥಳೀಯರು.
ರಸ್ತೆ ಮಧ್ಯದಲ್ಲಿ ಬಿರುಕು..!
ಇನ್ನು, ಚೋರಡಿ ಮತ್ತು ಕುಂಸಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಬಿರುಕು ಬಿಟ್ಟಂತಾಗಿದೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತು ಈ ಬಿರುಕು ಕಂಟವಾಗಿದೆ. ಹೆದ್ದಾರಿಯ ಗುಂಡಿಗಳು, ಬಿರುಕುಗಳನ್ನು ಬಂದ್ ಮಾಡಿದರೆ ವಾಹನ ಸವಾರರು ನಿಶ್ಚಿಂತೆಯಿಂದ ಈ ಮಾರ್ಗದಲ್ಲಿ ಓಡಾಡಬಹುದಾಗಿದೆ.
ಇದನ್ನೂ ಓದಿ – ವಾಹನ ಸವಾರರ ಹುಷಾರ್, ಶಿವಮೊಗ್ಗದ ಈ ರಸ್ತೆಯಲ್ಲಿ ನಿಮ್ಮ ಕೈ, ಕಾಲುಗಳಿಗೆ ನೀವೆ ಜವಾಬ್ದಾರರು