ಶಿವಮೊಗ್ಗ ಲೈವ್.ಕಾಂ | SAGARA NEWS | 04 FEBRUARY 2021
ನಡು ರಸ್ತೆಯಲ್ಲಿ ಸಿಲಿಂಡರ್ ಇರಿಸಿ, ಪೆಟ್ರೋಲ್ ಬೆಲೆ ಇಳಿಸಿ ಎಂಬ ಬೋರ್ಡ್ ತೂಗು ಹಾಕಿರುವ ವಾಹನ ನಿಲ್ಲಿಸಿ, ಬೆಲೆ ಏರಿಕೆ ವಿರುದ್ಧ ಸಾಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ
ಪಟ್ಟಣದ ಸಾಗರ ಹೊಟೇಲ್ ಸರ್ಕಲ್ನಲ್ಲಿ ಜನಮನ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಕೇಂದ್ರ ಸರ್ಕಾರ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಸಾಮಾನ್ಯರು ಬದುಕಲಾಗದ ಸ್ಥಿತಿ
ಪ್ರತಿಭಟನೆ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ಮೋದಿ ಸರ್ಕಾರಕ್ಕೆ ಸ್ಪಷ್ಟ ಆರ್ಥಿಕ ನೀತಿ ಇಲ್ಲ. ಅವರ ಪಕ್ಷದ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರು ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿದ್ದಾರೆ. ಮೋದಿ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆಯ ಪರಿಣಾಮ ಸಾಮಾನ್ಯರು ಬದುಕುವುದೆ ಕಷ್ಟವಾಗಿದೆ ಎಂದರು.
ಇದನ್ನೂ ಓದಿ | ಗಣಪತಿ ಕೆರೆಯಲ್ಲಿ ನೀರು ನಾಯಿಗಳ ಚಿನ್ನಾಟ, ಕಣ್ತುಂಬಿಕೊಳ್ಳಲು ಬರ್ತಿದ್ದಾರೆ ಜನ, ಮೀನುಗಾರರಿಗೆ ಸಂಕಷ್ಟ
ಸಂಘಟನೆ ಸಂಚಾಲಕ ಡಿ.ದಿನೇಶ್, ನಗರಸಭೆ ಸದಸ್ಯೆ ಲಲಿತಮ್ಮ, ಪ್ರಮುಖರಾದ ಶಿವಾನಂದ ಕುಗ್ವೆ, ವಸಂತಕುಮಾರ್, ಎಲ್.ಟಿ.ತಿಮ್ಮಪ್ಪ, ಕಾಶಿನಾಥ್ ಚೌಧರಿ, ಸೈಯ್ಯದ್ ಜಾಕೀರ್, ಮರಿಯಾ ಲೀಮಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]