ಶಿವಮೊಗ್ಗ ಲೈವ್.ಕಾಂ | SAGARA NEWS | 4 ಆಗಸ್ಟ್ 2020
ಬಂದಗದ್ದೆ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ನಿರ್ಧಾರ ಕೈಬಿಡುವಂತೆ ಸಾಗರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ವಿರೋಧಕ್ಕೆ ಕಾರಣವೇನು?
ವಸತಿ ಶಾಲೆಯಲ್ಲಿ ಕೇರ್ ಸೆಂಟರ್ ಆರಂಭಕ್ಕೆ ಸಿದ್ಧತೆ ನಡೆದಿದೆ. ಆದರೆ ಈ ಭಾಗದಲ್ಲಿ ಹಂದಿಗೋಡು ಕಾಯಿಲೆಯಿಂದ ಬಳಲುತ್ತಿರುವವರು ಇದ್ದಾರೆ. ಹಂದಿಗೋಡು ಕಾಯಿಲೆಗೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಈ ಮಧ್ಯೆ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಕ್ಕೆ ಹಂದಿಗೋಡು ಕಾಯಿಲೆ ಸೋಂಕಿತರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಂದಗದ್ದೆ ಡಾ.ಅಂಬೇಡ್ಕರ್ ಗ್ರಾಮ ಹಿತರಕ್ಷಣಾ ಸಮಿತಿ, ತಾಲೂಕು ಪ್ರಗತಿಪರ ಒಕ್ಕೂಟದ ನೇತೃತ್ವದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ರಮೇಶ್ ಈ.ಕೆಳದಿ, ಸುರೇಶ್, ದುರ್ಗಪ್ಪ, ಗಣಪತಿ, ಪ್ರಕಾಶ್, ಉದಯ್, ಅಣ್ಣಪ್ಪ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]