ಶಿವಮೊಗ್ಗ ಲೈವ್.ಕಾಂ | SAGARA | 7 ನವೆಂಬರ್ 2019
ವಿವಿಧ ಖಾಸಗಿ ಫೈನಾನ್ಸ್ ಸಂಸ್ಥೆಗಳು ನೀಡುತ್ತಿರುವ ಕಿರುಕುಳದ ವಿರುದ್ಧ ಕಾನೂನು ಕ್ರಮಜರುಗಿಸುವಂತೆ ಒತ್ತಾಯಿಸಿ ಸಾಗರದಲ್ಲಿ ನೊಂದ ಗ್ರಾಹಕರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಸಾಗರ ನಗರ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಸಾಲ ನೀಡುತ್ತಿರುವ ಖಾಸಗಿ ಫೈನಾನ್ಸ್’ಗಳು ಸಾಲ ಪಡೆಯುವ ನೆಪದಲ್ಲಿ ಗ್ರಾಹಕರಿಗೆ ಕಿರುಕುಳ ನೀಡುತ್ತಿವೆ. ಸಾಲ ವಸೂಲಿ ನೆಪದಲ್ಲಿ ಮನೆಗೆಬರುವ ಫೈನಾನ್ಸ್ ಕಂಪನಿಯವರು ಬಾಯಿಗೆ ಬಂದಂತೆ ಮಾತನಾಡುವ ಜತೆಗೆ ಹಣ ಕೊಡದೆ ಮನೆಯಿಂದ ಹೋಗುವುದಿಲ್ಲ. ಹಣ ಕಟ್ಟುವುದು ವಿಳಂಬವಾದರೆ ಅಶ್ಲೀಲ ಪದಗಳಿಂದ ನಿಂದಿಸುತ್ತಾರೆ.
ಈ ಬಗೆ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ ಎಂದು ನೊಂದವರು ದೂರಿದರು. ಅತಿಖಾ ಖಾನಂ, ಸಾಜಿಯಾ, ಸರ್ಫಿನ್, ಭಾಗೀರಥಿ, ಸಬೀನಾ, ಉಮಾ, ವಿದ್ಯಾ, ಸಹಬಾಜ್ ಇತರರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]