SHIVAMOGGA LIVE NEWS
SAGARA | ಸಿಗಂದೂರಿಗೆ (SIGANDUR LAUNCH) ಸಂಪರ್ಕ ಕಲ್ಪಿಸುವ ಲಾಂಚ್ ಸೇರಿದಂತೆ ಶರಾವತಿ ಹಿನ್ನೀರು ಭಾಗದಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಲಾಂಚ್’ಗಳ ಸಿಬ್ಬಂದಿಗೆ ಒಂದು ವರ್ಷದಿಂದ ಸಂಬಳ ನೀಡಿಲ್ಲ. ಸರ್ಕಾರದ ಕ್ರಮ ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತುಮರಿ ಸಮೀಪ ಸಿಗಂದೂರು ಲಾಂಚ್ ಮುಂಭಾಗ ವಿವಿಧ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು.
ಒಂದು ವರ್ಷದಿಂದ ವೇತನವಿಲ್ಲ
ಶರಾವತಿ ಎಡದಂಡೆಯಲ್ಲಿ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಸೇರಿದಂತೆ ಮುಪ್ಪಾನೆ, ಹಸಿರುಮಕ್ಕಿ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿರುವ ಲಾಂಚ್ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗಿಲ್ಲ. ಒಂದು ವರ್ಷದಿಂದ ಇವರಿಗೆ ಸಂಬಳ ನೀಡಿಲ್ಲ. ಇನ್ನು, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಒಳನಾಡು ಜಲಸಾರಿಗೆ ಇಲಾಖೆ ನೌಕರರ ಮೇಲೆ ಒತ್ತಡವನ್ನು ಹೇರಿದೆ ಎಂದು ಆಪಾದಿಸಿ ವಿವಿಧ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿದವು.
ಲಾಂಚ್ ಸಿಬ್ಬಂದಿ ಸೇವೆ ಮೆಚ್ಚುವಂತದ್ದು
ಪ್ರತಿಭಟನೆ ವೇಳೆ ಮಾತನಾಡಿದ ಜನಪರ ಹೋರಾಟ ವೇದಿಕೆ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಅವರು, ದ್ವೀಪದ ಜನರು ಮತ್ತು ಸಿಗಂದೂರು ಪ್ರವಾಸಿಗರಿಗೆ ಲಾಂಚ್ ಸಿಬ್ಬಂದಿ ನಿರಂತರ ಸೇವೆ ನೀಡುತ್ತಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿಯಲ್ಲೂ ಇವರ ಸೇವೆ ಅನನ್ಯ. ಇಂತಹ ಅರೆಕಾಲಿಕ ಸಿಬ್ಬಂದಿಗೆ ವೇತನ ನೀಡದೆ ಇಲಾಖೆ ಮೊಂಡುತನ ಪ್ರದರ್ಶಿಸುತ್ತಿದೆ. ಇದು ‘ಸರ್ಕಾರಿ ಪ್ರಯೋಜಿತ ಜೀತ ಪದ್ಧತಿ’ ಎಂದು ಆರೋಪಿಸಿದರು.
ಸರ್ಕಾರಕ್ಕೆ ಗುಡುವು ನಿಗದಿ
ಲಾಂಚ್ (SIGANDUR LAUNCH) ಹೊರಗುತ್ತಿಗೆ ನೌಕರರಿಗೆ 12 ತಿಂಗಳಿಂದ ವೇತನ ನೀಡಿಲ್ಲ. ಸೆ.20ರ ಒಳಗೆ ಈ ನೌಕರರಿಗೆ ವೇತನ ನೀಡಬೇಕು ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಗಡುವು ನೀಡಿದ್ದಾರೆ. ಒಂದು ವೇಳೆ ವೇತನ ಪಾವತಿ ಮಾಡದೆ ಇದ್ದರೆ ಸೆ.22ರಂದು ಲಾಂಚ್ ತಡೆದು ಪ್ರತಿಭಟನೆ ನಡೆಸಲಾಗುತ್ತದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರೆಗೆ ಧರಣಿ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕಾಗೋಡು ಜನಪರ ವೇದಿಕೆ ಅಧ್ಯಕ್ಷ ಗಣೇಶ್ ಜಾಕಿ, ಹೊಳೆಬಾಗಿಲು ವಾಹನ ಮಾಲೀಕರ ಸಂಘದ ಅಧ್ಯಕ್ಷ ಮಹೇಶ, ಸಹಮತ ವೇದಿಕೆಯ ಅಣ್ಣಪ್ಪ ತುಮರಿ, ಗಣೇಶ್, ಯೋಗರಾಜ ಜೈನ್, ಹರೀಶ್, ವಿಜಯ ಕುಮಾರ್, ಸಂದೀಪ್, ಮಧುಕುಮಾರ್, ಧನಂಜಯ, ಹರೀಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಕ್ಲಿಕ್ ಮಾಡಿ ಇದನ್ನೂ ಓದಿ | ಅನಾಹುತ ತಪ್ಪಿಸಿದ ಮೈಸೂರು – ತಾಳಗುಪ್ಪ ರೈಲು ಸಿಬ್ಬಂದಿಗೆ ಸನ್ಮಾನ, ಏನಾಗಿತ್ತು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.