ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RAINFALL NEWS, 20 AUGUST 2024 : ಮಘ ಮಳೆ ಅಬ್ಬರಕ್ಕೆ (Rain Effect) ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಹಾನಿ ಉಂಟಾಗಿದೆ. ಸೋಮವಾರ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿವೆ. ಗದ್ದೆ, ತೋಟಗಳು ಜಲಾವೃತವಾಗಿ ನಷ್ಟ ಉಂಟಾಗಿದೆ.
ಎಲ್ಲೆಲ್ಲಿ ಏನೇನು ಹಾನಿಯಾಗಿದೆ?
ಶಿವಮೊಗ್ಗ ಲೈವ್.ಕಾಂ : ಭಾರಿ ಮಳೆಗೆ ಶಿವಮೊಗ್ಗದ ಅಬ್ಬಲಗೆರೆ ಕೆರೆ ಕೋಡಿ ಬಿದ್ದು, ಜಲಪಾತ ಸೃಷ್ಟಿಯಾಗಿದೆ. ಶಿವಮೊಗ್ಗ – ಶಿಕಾರಿಪುರ ಹೆದ್ದಾರಿ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇನ್ನು, ಬಸವನಗಂಗೂರು ಸರ್ಕಾರಿ ಶಾಲೆ ಜಲಾವೃತವಾಗಿತ್ತು. ನೀರು ನುಗ್ಗುತ್ತಿದ್ದಂತೆ ಶಿಕ್ಷಕರು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು. ಕೊಠಡಿಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಶಿಕ್ಷಕರು ಹರಸಾಹಸ ಮಾಡಬೇಕಾಯಿತು.ಕೋಡಿ ಬಿದ್ದ ಅಬ್ಬಲಗೆರೆ ಕೆರೆ
ಶಿವಮೊಗ್ಗ ಲೈವ್.ಕಾಂ : ಬೊಮ್ಮನಕಟ್ಟೆ ದೇಗುಲದ ಸಮೀಪ ಕೆರೆಯ ತೂಬು ಮತ್ತು ಪೈಪ್ ಒಡೆದು ಹಾನಿ ಉಂಟಾಗಿದೆ ಎನ್ನಲಾಗಿದೆ. ಈಗಾಗಲೇ ಕೆರೆ ಭರ್ತಿಯಾಗಿತ್ತು. ಸೋಮವಾರ ಸುರಿದ ಮಳೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ತೂಬು ಮತ್ತು ಪೈಪ್ ಒಡೆದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈಚೆಗೆ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸ್ಥಳೀಯರಿಗೆ ಧೈರ್ಯ ಹೇಳಿದರು.ತೂಬು ಒಡೆದು ಬೊಮ್ಮನಕಟ್ಟೆಗೆ ನೀರು
ಶಿವಮೊಗ್ಗ ಲೈವ್.ಕಾಂ : ಶಿವಮೊಗ್ಗ ತಾಲೂಕಿನ ಆಯನೂರು, ಕಾಚಿಕೊಪ್ಪ ಸೇರಿದಂತೆ ವಿವಿಧೆ ಜೋರು ಮಳೆಯಾಗಿದೆ. ಈ ಭಾಗದಲ್ಲಿ ವಿವಿಧೆಡೆ ಜಮೀನಿಗೆ ನೀರು ನುಗ್ಗಿದೆ. ಭತ್ತ, ಶುಂಠಿ ಬೆಳೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.ತಾಲೂಕಿನ ವಿವಿಧೆಡೆ ಮಳೆಯಿಂದ ಹಾನಿ
ಇದನ್ನೂ ಓದಿ ⇒ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ?
ಶಿವಮೊಗ್ಗ ಲೈವ್.ಕಾಂ : ಆನಂದಪುರ ಸುತ್ತಮುತ್ತ ಭಾರಿ ಮಳೆಗೆ ಬೆಳೆ ಹಾನಿ ಉಂಟಾಗಿದೆ. ಸಿದ್ದೇಶ್ವರ ಕಾಲೋನಿ, ಮುಂಬಾಳುವಿನಲ್ಲಿ ಭಾರಿ ಮಳೆಯಾಗಿದೆ. ಚರಂಡಿಗಳು ಉಕ್ಕಿ ಹರಿದು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿತ್ತು. ಮುಂಬಾಳುವಿನಲ್ಲಿ ಗದ್ದೆಗೆ ನೀರು ನುಗ್ಗಿದೆ. ಈಚೆಗೆ ನಾಟಿ ಮಾಡಿದ್ದ ಭತ್ತದ ಸಸಿ ಕೊಚ್ಚಿ ಹೋಗಿದೆ. ಹಲವು ಮನೆಗಳಿಗು ನೀರು ನುಗ್ಗಿದ್ದು ವಸ್ತುಗಳು ಹಾನಿಯಾಗಿವೆ.ಆನಂದಪುರ ಸುತ್ತಮುತ್ತ ಮಳೆ ಅಬ್ಬರ
ಇದನ್ನೂ ಓದಿ ⇒ ರೀಲ್ಸ್ ಮಾಡಿದರೆ ಅಂಗಡಿಗೆ ಹೆಚ್ಚಾಗ್ತಾರೆ ಗ್ರಾಹಕರು, ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಬೆಸ್ಟ್ ಉದಾಹರಣೆಗಳು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422