SHIVAMOGGA LIVE NEWS | 19 JULY 2024
SAGARA NEWS : ಈ ಬಾರಿ ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ (Rain). ಇದರಿಂದ ವಿವಿಧೆಡೆ ಧರೆ ಕುಸಿತ, ಆಸ್ತಿಪಾಸ್ತಿ ಹಾನಿಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ.
ಸಾಗರ ತಾಲೂಕಿನಲ್ಲಿ ಜುಲೈ ತಿಂಗಳ ವಾಡಿಕೆ ಮಳೆ 847.70 ಮಿ.ಮೀ. ಆದರೆ ಈವರೆಗೂ ತಾಲೂಕಿನಲ್ಲಿ 1071.40 ಮಿ.ಮೀ ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಹಾನಿಯ ಭೀತಿ ಎದುರಾಗಿದೆ.
ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಚಗೋಡು ಗ್ರಾಮದಲ್ಲಿ ಗುಡ್ಡ ಜರಿದು ಕಲ್ಲು, ಮಣ್ಣು ಸಮೀಪದ ಹಳ್ಳಕ್ಕೆ ಬಿದ್ದಿದೆ. ಹಳ್ಳದ ನೀರು ಅಕ್ಕಪಕ್ಕದ ತೋಟಗಳಿಗೆ ನುಗ್ಗಿದ್ದು, ರೈತರಲ್ಲಿ ಆಂತಕ ಮೂಡಿಸಿದೆ. ಸುಮಾರು ಆರೇಳು ಎಕರೆ ತೋಟಕ್ಕೆ ಹಳ್ಳದ ನೀರು ನುಗ್ಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧರೆ ಕುಸಿತ, ತೋಟಗಳು ಜಲಾವೃತ
ಕರೂರು ಹೋಬಳಿಯ ಹೊಸಮನೆಯ ಬೀರಾನಾಯ್ಕ ಅವರ ಮನೆ ಹಿಂಭಾಗದ ಕೊಟ್ಟಿಗೆ ಕುಸಿದಿದೆ. 9 ಜಾನುವಾರುಗಳನ್ನು ರಕ್ಷಿಸಲಾಗಿದೆ. 3 ಜಾನುವಾರುಗಳು ಗಂಭೀರ ಗಾಯಗೊಂಡಿವೆ. ಹುಲ್ಲು, ಹೆಂಚ್ಚು, ನಾಟಕ್ಕೆ ಹಾನಿಯಾಗಿದೆ. ಸುಮಾರು 1 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಸಲಾಗಿದೆ. ಗಾಳಿ, ಮಳೆಗೆ ಕುಸಿದ ಕೊಟ್ಟಿಗೆ
ಸಾಗರ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ 530 ಹೆಕ್ಟೇರ್ ಭತ್ತದ ಗದ್ದೆ, 4.4 ಹೆಕ್ಟೇರ್ ಅಡಿಕೆ ತೋಟ ಜಲಾವೃತವಾಗಿದೆ. ತಾಳಗುಪ್ಪ ಹೋಬಳಿಯ ಬೀಸನಗದ್ದೆ ಭಾಗದಲ್ಲಿ 150 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ. ಜುಲೈ ತಿಂಗಳಲ್ಲಿ ಈವರೆಗೆ 20 ಮನೆಗಳು, 7 ಕೊಟ್ಟಿಗೆಗಳು ಹಾನಿಯಾಗಿವೆ. 1 ಜಾನುವಾರು ಮೃತಪಟ್ಟಿದೆ. 530 ಹೆಕ್ಟೇರ್ ಗದ್ದೆಗೆ ಹಾನಿ
ಮಳೆ ಹಾನಿಗೆ ಸಂಬಂಧಿಸಿದಂತೆ ಸಾಗರ ತಾಲೂಕು ಆಡಳಿತ ಸಹಯವಾಣಿ ಸ್ಥಾಪಿಸಿದೆ. ತುರ್ತು ನೆರವು ಅಗತ್ಯವಿದ್ದವರು ಈ ನಂಬರ್‌ಗೆ ಕರೆ ಮಾಡಬಹುದಾಗಿದೆ. ಸಹಾಯವಾಣಿ ಸಂಖ್ಯೆ 08183 226074 ಸಂಪರ್ಕಿಸಬಹುದಾಗಿದೆ. ಸಹಾಯವಾಣಿ ಸ್ಥಾಪಿಸಿದ ಆಡಳಿತ
ಇದನ್ನೂ ಓದಿ ⇓
ಶಿವಮೊಗ್ಗ ಜಿಲ್ಲೆಗೆ ಮತ್ತೆ ರೆಡ್ ಅಲರ್ಟ್, ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200