ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 31 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ರಂಗಕರ್ಮಿ, ರಂಗ ಶಿಕ್ಷಕ ಸಾಗರ ತಾಲೂಕಿನ ಚಿದಂಬರರಾವ್ ಜಂಬೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ (Rajyotsava Award) ಘೋಷಿಸಲಾಗಿದೆ. ರಂಗಭೂಮಿಯ ದ್ರೋಣಾಚಾರ್ಯ ಎಂದೇ ಖ್ಯಾತಿ ಪಡೆದಿರುವ ಚಿದಂಬರರಾವ್ ಜಂಬೆ ಅವರು ದೇಶಾದ್ಯಂತ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇವರ ಗರಡಿಯಲ್ಲಿ ರಂಗ ಶಿಕ್ಷಣ ಪಡೆದವರು ರಂಗ ಕಲಾವಿದರಾಗಿ, ಸಿನಿಮಾ ಮತ್ತು ಕಿರುತೆರೆಯಲ್ಲಿ ನಟರಾಗಿ ಜನಪ್ರಿಯರಾಗಿದ್ದಾರೆ. ನಟ ದರ್ಶನ್ ಕೂಡ ಚಿದಂಬರರಾವ್ ಜಂಬೆ ಅವರ ಬಳಿ ಅಭಿನಯ ಕಲಿತವರು.
ಚಿದಂಬರರಾವ್ ಜಂಬೆಯವರ ಕುರಿತ 4 ಪ್ರಮುಖಾಂಶ
ಪಾಯಿಂಟ್ 1 : ಬಿ.ವಿ.ಕಾರಂತರ ನೆಚ್ಚಿನ ಶಿಷ್ಯ
ಸಾಗರ ತಾಲೂಕು ಅಡ್ಡೇರಿಯ ಕೃಷಿಕ ಕುಟುಂಬದಲ್ಲಿ 1949ರಲ್ಲಿ ಚಿದಂಬರರಾವ್ ಜಂಬೆ ಅವರ ಜನನ. ಸಾಗರ ತಾಲೂಕಿನಲ್ಲಿಯೇ ವಿದ್ಯಾಭ್ಯಾಸ. 1979ರಲ್ಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ಶಿಕ್ಷಣ ಪಡೆದರು. ಆಗ ನಾಟಕ ಶಾಲೆಯ ನಿರ್ದೇಶಕರಾಗಿದ್ದ ಬಿ.ವಿ.ಕಾರಂತ ಅವರ ಅಚ್ಚುಮೆಚ್ಚಿನ ಶಿಷ್ಯರಲ್ಲಿ ಇವರು ಒಬ್ಬರು.
ಪಾಯಿಂಟ್ 2 : ನೀನಾಸಂನಲ್ಲಿ ಎರಡು ದಶಕ
ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು ಬಂದ ಮೇಲೆ ಸಾಗರದ ಹೆಗ್ಗೋಡಿನ ನೀನಾಸಂನಲ್ಲಿ ರಂಗ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭ. ನೀನಾಸಂನಲ್ಲಿ 22 ವರ್ಷ ರಂಗ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಂತರ ರಂಗಾಯಣದ ನಿರ್ದೇಶಕರಾಗಿ ಜವಾಬ್ದಾರಿ. ಸಾಣೇಹಳ್ಳಿಯ ರಂಗ ಶಿಕ್ಷಣ ಶಾಲೆ ಕಟ್ಟುವಲ್ಲಿಯು ಪ್ರಮುಖ ಪಾತ್ರ ವಹಿಸಿದ್ದರು. ದೇಶಾದ್ಯಂತ ಅನೇಕ ರಂಗ ಶಾಲೆಗಳಿಗೆ ಅತಿಥಿ ಉಪನ್ಯಾಸಕರಾಗಿ, ನಿರ್ದೇಶಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಾಯಿಂಟ್ 3 : ರಂಗಭೂಮಿಯ ದ್ರೋಣಾಚಾರ್ಯ
ಚಿದಂಬರರಾವ್ ಜಂಬೆ ಅವರನ್ನು ರಂಗಭೂಮಿಯ ದ್ರೋಣಾಚಾರ್ಯ ಎಂದು ಕರೆಯಲಾಗುತ್ತದೆ. ದೊಡ್ಡ ಸಂಖ್ಯೆ ರಂಗ ಕಲಾವಿದರಿಗೆ ತರಬೇತಿ ನೀಡಿದ್ದಾರೆ. ಇವರ ಬಳಿ ರಂಗ ಶಿಕ್ಷಣ ಪಡೆದವರು ರಂಗ ಭೂಮಿಯಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಚಿತ್ರರಂಗ ಮತ್ತು ಕಿರುತೆರೆಯ ಹಲವು ಕಲಾವಿದರು ಇವರ ಗರಡಿಯಲ್ಲಿ ಅಭಿನಯ ಕಲಿತಿದ್ದಾರೆ. ನೀನಾಸಂನ ತಿರುಗಾಟಕ್ಕೆ ಘನತೆ ತಂದುಕೊಟ್ಟ ಪ್ರಮುಖರು.
ಪಾಯಿಂಟ್ 4 : ಹೊಟೇಲ್ನಲ್ಲಿ ಕೆಲಸ ಮಾಡಿದ್ದರು
ಚಿದಂಬರರಾವ್ ಜಂಬೆ ಅವರ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು. ಆದರೂ ಮನೆ ತೊರೆದು ಕೆಲಸ ಅರಸುತ್ತ ಮೈಸೂರು, ಮಂಗಳೂರು, ಊಟಿಗೆ ತೆರಳಿದ್ದರು. ಬೆಂಗಳೂರಿನ ಹೊಟೇಲ್ ಒಂದರಲ್ಲಿ ಸಪ್ಲಯರ್ ಆಗಿಯು ಕೆಲಸ ಮಾಡಿದ್ದರು. ಇದೇ ಸಂದರ್ಭ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿತಿದ್ದರು.
ಇದನ್ನೂ ಓದಿ – ಕರ್ನಾಟಕ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಘ ಅಂದ್ರೆ ಬಸ್ ಸ್ಟಾಪ್ ಹೆಸರಲ್ಲ, ಇಲ್ಲಿದೆ 7 ಪ್ರಮುಖ ವಿಷಯ