ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 8 AUGUST 2023
SAGARA : ಮ್ಯಾನ್ ಹೋಲ್ ಮುಚ್ಚಳ ಒಡೆದು ಗುಂಡಿಯಾಗಿದ್ದು ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ಸ್ಥಳೀಯರು ಗುಂಡಿ ಬಿದ್ದ ಜಾಗದಲ್ಲಿ ಕೆಂಪು ಧ್ವಜ ನೆಟ್ಟು ವಿಭಿನ್ನವಾಗಿ ಪ್ರತಿಭಟನೆ (Protest) ನಡೆಸಿದರು.
ಸಾಗರ (Sagara) ನಗರದ ಮಾರ್ಕೆಟ್ ರಸ್ತೆಯ ಕೋಮಲ್ ಬೇಕರಿ ಎದುರಿನ ರಸ್ತೆಯಲ್ಲಿ ಮ್ಯಾನ್‌ಹೋಲ್ ಮುಚ್ಚಳ ಒಡೆದಿದೆ. ಇದರಿಂದ ದೊಡ್ಡ ಹೊಂಡ ನಿರ್ಮಾಣವಾಗಿದೆ. ರಸ್ತೆಯಲ್ಲಿ ಗುಂಡಿ ಇರುವುದು ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಮ್ಯಾನ್ ಹೋಲ್ ಮುಚ್ಚಳ ಸರಿಪಡಿಸುವಂತೆ ಸ್ಥಳೀಯರು ನಗರಸಭೆಗೆ ಮನವಿ ಮಾಡಿದರು ಪ್ರಯೋಜವಾಗಲಿಲ್ಲ.
ಇದನ್ನೂ ಓದಿ- ಶಿವಮೊಗ್ಗ – ಸವಳಂಗ ರಸ್ತೆಯಲ್ಲಿ ಬಸ್ಸು, ಕಾರು ಡಿಕ್ಕಿ
ಅಧಿಕಾರಿಗಳ ಅಸಡ್ಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ವ್ಯಾಪಾರಿ ಶಿವಾನಂದ ಕಾಮತ್ ಮತ್ತು ಕೋಮಲ್ ರಾಘವೇಂದ್ರ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಗುಂಡಿ ಸುತ್ತಲು ಕಲ್ಲುಗಳನ್ನು ಇರಿಸಿ, ಕೆಂಪು ಧ್ವಜ ನೆಟ್ಟು ಪ್ರತಿಭಟಿಸಿದರು. ವಾಹನ ಸವಾರರಿಗೆ ಗುಂಡಿ ಇದೆ ಎಂದು ಗೊತ್ತಾಗಲಿ ಎಂದು ಕೆಂಪು ಧ್ವಜ ನೆಡಲಾಗಿದೆ. ಇನ್ನಾದರು ಮ್ಯಾನ್ ಹೋಲ್ ಮುಚ್ಚಳ ಸರಿಪಡಿಸಲಿ ಎಂದು ಆಗ್ರಹಿಸಿದರು.
LATEST NEWS
- ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

- ಉಪನ್ಯಾಸಕ ಸುರೇಶ್ ನಿಗೂಢ ಸಾವು ಕೇಸ್, ಶಿವಮೊಗ್ಗ SP ಫಸ್ಟ್ ರಿಯಾಕ್ಷನ್, ಏನಂದ್ರು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

- ಮೀನು ಮಾರುಕಟ್ಟೆ ಬಳಿ ಕಿರಿಕ್, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು
















