ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಸೆಪ್ಟೆಂಬರ್ 2021
ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತ ರಿಲೀಫ್ ನೀಡಿದೆ. ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದ ಜಿಲ್ಲಾಡಳಿತ ಈಗ ಹೊಸ ನಿಯಮ ಜಾರಿಗೊಳಿಸಿದೆ.
ಇನ್ಮುಂದೆ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯವಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ತಿಳಿಸಿದ್ದಾರೆ.
ಲಸಿಕೆ ಹಾಕಿಸಿದ್ದರಷ್ಟೇ ಜೋಗ ದರ್ಶನ
ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಇನ್ಮುಂದೆ ಕೋವಿಡ್ ವರದಿ ಬದಲು ಲಸಿಕೆ ಪಡೆದ ಮಾಹಿತಿ ತಿಳಿಸಬೇಕು. ಕನಿಷ್ಠ ಒಂದು ಲಸಿಕೆಯನ್ನಾದರೂ ಪಡೆದವರಿಗಷ್ಟೇ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂದು ರಾಮಕೃಷ್ಣ ಅವರು ತಿಳಿಸಿದ್ದಾರೆ. ಜಲಪಾತದ ಗೇಟ್ ಮುಂದೆ ಲಸಿಕೆ ಪಡೆದದ್ದನ್ನು ಪರಿಶೀಲಿಸಿದ ಬಳಿಕ ಪ್ರವಾಸಿಗರನ್ನು ಒಳ ಬಿಡಲಾಗುತ್ತದೆ.
ಪ್ರವಾಸಿಗರು ಹೆಚ್ಚಳವಾಗುವ ನಿರೀಕ್ಷೆ
ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಳವಾಗಿರುವ ಹಿನ್ನೆಲೆ ಜೋಗ ಜಲಪಾತ ಮೈದುಂಬಿಕೊಂಡಿದೆ. ರಾಜಾ, ರಾಣಿ, ರೋರರ್, ರಾಕೆಟ್ ಜಲಪಾತಗಳು ಮೈದುಂಬಿಕೊಂಡು ಧುಮ್ಮಿಕ್ಕುತ್ತಿವೆ. ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ಈಗ ನಿಯಮ ಸಡಿಲವಾಗಿರುವುದರಿಂದ ಹೆಚ್ಚಿನ ಪ್ರವಾಸಿಗರು ಜಲಪಾತಕ್ಕೆ ಬರುವ ನಿರೀಕ್ಷೆಯಿದೆ.
ಗೇಟ್ ಮುಂದೆ ನಿತ್ಯ ಕಿರಿಕ್
ಕೋವಿಡ್ ವರದಿ ಇಲ್ಲದೆ ಜಲಪಾತ ವೀಕ್ಷಣೆಗೆ ಹಲವರು ಬರುತ್ತಿದ್ದರು. ಇದೆ ಕಾರಣಕ್ಕೆ ಗೇಟ್ ಮುಂದೆ ಗಲಾಟೆಯಾಗುತಿತ್ತು. ಪ್ರಭಾವ ಬಳಸಿ ಕೆಲವರು ವರದಿ ಇಲ್ಲದೆಯೂ ಜಲಪಾತ ವೀಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಹಲವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಈಗ ಪ್ರವಾಸಿಗರಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ | ಜೋಗ ಜಲಪಾತದಲ್ಲಿ ಅಧಿಕಾರಿಗಳ ದಾಳಿ, ಹೋಂ ಗಾರ್ಡ್’ಗಳು ಸೇರಿ ಏಳು ಮಂದಿ ವಿರುದ್ಧ ಕೇಸ್
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200