ಸಾಗರ : ಭೀಮನಕೋಣೆ ರಸ್ತೆಯಲ್ಲಿ ಹೊಸದಾಗಿ ಮದ್ಯದಂಗಡಿ (Shop) ತೆರೆಯಲು ಅವಕಾಶ ನೀಡಿದ್ದನ್ನು ಖಂಡಿಸಿ ವಿಜಯನಗರ ನಾಗರಿಕ ವೇದಿಕೆ ವತಿಯಿಂದ ಮದ್ಯದಂಗಡಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಮದ್ಯದ ಅಂಗಡಿಯನ್ನು ಕೂಡಲೆ ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಈ ಭಾಗದಲ್ಲಿ ವಿಜಯನಗರ, ರಾಮನಗರ ಸೇರಿದಂತೆ ಅನೇಕ ಬಡಾವಣೆಗಳಿವೆ. ಶಾಂತಿ, ಸುವ್ಯವಸ್ಥೆ ಕಾಡುವ ಹಿನ್ನೆಲೆ ಮದ್ಯದಂಗಡಿ (Shop) ತೆರೆಯಲು ಅವಕಾಶ ನೀಡಬಾರದು.
– ಕೆ.ಆರ್.ಗಣೇಶ್ ಪ್ರಸಾದ್, ನಗರಸಭೆ ಸದಸ್ಯ
ಇದನ್ನೂ ಓದಿ » ಗೋವಾ ನಂಬರ್ ಕಾರು ತಡೆದ ಅಧಿಕಾರಿಗಳು, ಸಿಕ್ತು ನಾನಾ ಬ್ರಾಂಡ್‌ನ ಮದ್ಯ, ಎಷ್ಟು ಲೀಟರ್ ಇತ್ತು?
ತೆರಿಗೆ ಸಂಗ್ರಹ ಉದ್ದೇಶಕ್ಕಾಗಿ ಸರ್ಕಾರ ಎಲ್ಲೆಂದರಲ್ಲಿ ಮದ್ಯದಂಗಡಿ ತೆರೆಯುವುದು ಸರಿಯಲ್ಲ. ಜನರ ನೆಮ್ಮದಿ ಕಸಿದುಕೊಂಡು ಸರ್ಕಾರ ಅಬಕಾರಿ ಇಲಾಖೆ ಮೂಲಕ ಹಣ ಸಂಗ್ರಹ ಮಾಡುವುದನ್ನು ನಾಗರಿಕರು ಖಂಡಿಸಬೇಕು. ಶಾಸಕರು ಕೂಡ ಇದೇ ಬಡಾವಣೆ ನಿವಾಸಿಯಾಗಿದ್ದು, ಅವರ ಗಮನಕ್ಕು ವಿಷಯ ತರಲಾಗಿದೆ.
– ರವಿ ಲಿಂಗನಮಕ್ಕಿ, ನಗರಸಭೆ ಸದಸ್ಯ
ಈ ರಸ್ತೆಯಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಇವರಿಗೆ ತೊಂದರೆ ಆಗಲಿದೆ. ಮದ್ಯ ಸೇವಿಸಿ ಇಲ್ಲಿಯೆ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯರಾದ ಆರ್.ಶ್ರೀನಿವಾಸ ಮೇಸ್ತ್ರಿ, ಅರವಿಂದ ರಾಯ್ಕರ್, ನಾರಾಯಣಮೂರ್ತಿ ಕಾನುಗೋಡು, ಶಶಿಕಾಂತ್ ಸೇರಿದಂತೆ ಹಲವರು ಇದ್ದರು.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200