ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA, 16 AUGUST 2024 : ಭಾರಿ ಮಳೆಗೆ ಸಾಗರ ತಾಲೂಕು ಮೋರಿ ಕುಸಿದು ರಸ್ತೆ ಸಂಪರ್ಕ (Road Connectivity) ಕಡಿತಗೊಂಡಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿ ಹಾಗೂ ರಾಮನಗದ್ದೆ ನಡುವಿನ ಸಂಪರ್ಕ ರಸ್ತೆಯ ಮೋರಿ ಸಂಪೂರ್ಣವಾಗಿ ಕುಸಿದಿದೆ. ಈ ಗ್ರಾಮಗಳ ನಡುವಿನ ಸಂಚಾರ ಕಡಿತಗೊಂಡಿದೆ. ವಿಷಯ ತಿಳಿದು ಎಡಜಿಗಳೆಮನೆ ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಪ್ರವೀಣ, ಸದಸ್ಯ ರವಿ, ಸ್ಥಳೀಯ ವಾರ್ಡ್ ಸದಸ್ಯೆ ಪ್ರಶಾಂತಿ ಉಮೇಶ್ ಭೇಟಿ ನೀಡಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇನ್ನು, ಬೆಂಕಟವಳ್ಳಿ ಭಾಗದಿಂದ ಹರಿದುಬಂದ ನೀರಿನ ಪ್ರವಾಹ ಮೇಲಿನ ಬಾಳೆಹಳ್ಳಿಯ ಲಕ್ಷ್ಮೀನಾರಾಯಣ ಅವರ ಮನೆಯೊಳಗೆ ನುಗ್ಗಿದೆ. ಪಕ್ಕದ ಕೊಟ್ಟಿಗೆ ಭಾಗಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಭಾಗದಲ್ಲಿ ಹಲವರ ತೋಟದ ಕಾಲುವೆಗಳಲ್ಲಿ ನೀರು ತುಂಬಿ ತೋಟದ ಪಟ್ಟೆಗಳು ಕೊಚ್ಚಿಹೋಗಿವೆ. ಗುಡುಗು ಸಹಿತ ಭಾರಿ ಮಳೆಗೆ ಸಾಗರ ತಾಲೂಕಿನ ವಿವಿಧೆಡೆ ಹಾನಿಯಾಗಿದೆ.
ಇದನ್ನೂ ಓದಿ ⇒ ಗುಡ್ ಮಾರ್ನಿಂಗ್ ಶಿವಮೊಗ್ಗ | ಎಲ್ಲೆಲ್ಲಿ ಏನೇನಾಯ್ತು? ಜಿಲ್ಲೆಯ ಕಂಪ್ಲೀಟ್ ಸುದ್ದಿ ಒಂದೇ ಕ್ಲಿಕ್ನಲ್ಲಿ