ಸಾಗರದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪಿಕಪ್‌ ವಾಹನ, ಹೇಗಾಯ್ತು ಘಟನೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಸಾಗರ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬೊಲೇರೋ ಪಿಕಪ್‌ ವಾಹನ ಡಿಕ್ಕಿ (Collision) ಹೊಡೆದು ಪಲ್ಟಿಯಾಗಿದೆ. ಸಾಗರ ತಾಲೂಕು ಯಳವರಸೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯವಾಗಿಲ್ಲ.

ಬರೂರಿನ ವೀರಭದ್ರಪ್ಪ ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಕಾರಿನಲ್ಲಿ ಕುಗ್ವೆ ಗ್ರಾಮಕ್ಕೆ ತೆರಳುತ್ತಿದ್ದರು. ಯಳವರಸೆ ಬಳಿ ಎದುರಿನಿಂದ ಬಂದ ಬೊಲೇರೋ ಪಿಕಪ್‌ ವಾಹನ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಹಿಂದೆ ಬರುತ್ತಿದ್ದ ಪೊಲೀಸ್‌ ಜೀಪ್‌ ಕಂಡು ಲಾರಿ ನಿಲ್ಲಿಸಿ ಡ್ರೈವರ್‌ ಎಸ್ಕೇಪ್‌, ಕಾರಣವೇನು?

JNNCE-Admission-Advt-scaled

Collision

Leave a Comment