ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SAGARA NEWS | 09 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು ನಗರಸಭೆಯ ಸದನದ ಬಾವಿಗಿಳಿದು ಧರಣಿ ನಡೆಸಿದರು. ತಮ್ಮ ವಿಷಯ ಮಂಡನೆಗೆ ಅವಕಾಶ ನೀಡುತ್ತಿಲ್ಲ, ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.
ಸಭೆ ಬಳಿಕ ಧರಣಿ
ಸಾಗರ ನಗರಸಭೆಯ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು. ಶೂನ್ಯ ವೇಳೆಯಲ್ಲೂ ಪ್ರತಿಪಕ್ಷದವರು ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಪ್ರತಿಪಕ್ಷದವರು ಆರೋಪಿಸಿದರು. ಮಧ್ಯಾಹ್ನ ಸಭೆ ಮುಗಿಯುತ್ತಿದ್ದಂತೆ ಧರಣಿ ನಡೆಸಿದರು. ಅಧ್ಯಕ್ಷೆ ಮಧುರಾ ಶಿವಾನಂದ ಅವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಯಾರೆಲ್ಲ ಏನೆಂದರು?
ಜಾಕೀರ್, ಜೆಡಿಎಸ್ ಸದಸ್ಯ | ಶೂನ್ಯ ವೇಳೆಯಲ್ಲೂ ತಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲ. ಮಧ್ಯಾಹ್ನದ ಮೇಲೆ ಸಭೆ ನಡೆಸಿದರೂ ಮಾತನಾಡಲು ಅವಕಾಶವಿಲ್ಲ. ಕಾಟಾಚಾರಕ್ಕೆ ಸಭೆ ನಡೆಸುತ್ತಿದ್ದಾರೆ. ಊರಿನ ಕೆಲವನ್ನೂ ಮಾಡಬೇಕು, ನಮ್ಮ ಮಾತನ್ನೂ ಕೇಳಬೇಕು.
ಲಲಿತಮ್ಮ, ಸದಸ್ಯೆ | ನಗರಸಭೆಗೆ ನಾನು ಅಧ್ಯಕ್ಷೆಯಾಗಿದ್ದೆ. ಊರಿನ ಹಿತ ಕಾಯುವುದರ ಜೊತೆಗೆ, ಸದಸ್ಯ ತಿಳಿಸುವ ಸಮಸ್ಯೆಗಳನ್ನು ಆಲಿಸಬೇಕು. ಜನಪರ ಮನವಿಗಳಿಗೆ ಕಿಮ್ಮತ್ತು ನೀಡದೆ ಇದ್ದಕ್ಕಿದ್ದ ಹಾಗೆ ಸಭೆ ಮುಕ್ತಾಯಗೊಳಿಸಿದ್ದು ಸರಿಯಲ್ಲ.
ಮುಂದಿನ ಸಭೆಯಲ್ಲಿ ಅವಕಾಶ
ಪ್ರತಿಪಕ್ಷ ಸದಸ್ಯರು ಧರಣಿ ನಡೆಸುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಬಂದ ಅಧ್ಯಕ್ಷೆ ಮಧುರಾ ಶಿವಾನಂದ ಅವರು, ಸದಸ್ಯರನ್ನ ಸಮಾಧಾನಪಡಿಸಿದರು. ಅಲ್ಲದೆ ಮುಂದಿನ ಸಭೆಯಲ್ಲಿ ಎಲ್ಲರಿಗೂ ಚರ್ಚೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]