ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA, 22 AUGUST 2024 | ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯೇ ಆವೈಜ್ಞಾನಿಕ (Unscientific). ಇದರ ವಿರುದ್ಧ ಹೋರಾಟ ನಡೆಸುವ ಸಂಘಟನೆಗಳಿಗೆ ಪಕ್ಷಾತೀತ ಬೆಂಬಲ ನೀಡುವುದಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಮುಖ ವಿಷಯ ಪ್ರಸ್ತಾಪಿಸಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಹಾಲಪ್ಪ ಏನೆಲ್ಲ ಹೇಳಿದರು?
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಅವೈಜ್ಞಾನಿಕ ಯೋಜನೆ ರೂಪಿಸಲಾಗಿದೆ. ಲಿಂಗನಮಕ್ಕಿ ಜಲಾಶಯದಿಂದ 40 ಟಿಎಂಸಿ ನೀರು ಕೊಂಡೊಯ್ಯುವ ಯೋಜನೆಗೆ ಸರ್ವೆ ನಡೆಸಲಾಗುತ್ತಿದೆ. ಇದಕ್ಕೆ 73 ಲಕ್ಷ ರೂ. ಹಣ ಮೀಸಲಿಡಲಾಗಿದೆ ಎಂದು ಆರೋಪಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಎತ್ತಿನಹೊಳೆ ಯೋಜನೆಗೆ 22 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಒಂದೇ ಒಂದು ಹನಿ ನೀರನ್ನು ಹರಿಸಲು ಆಗದೆ ಯೋಜನೆ ವಿಫಲವಾಯಿತು. ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಸುಮಾರು 35 ಸಾವಿರ ಕೋಟಿ ರೂ. ಖರ್ಚಾಗಲಿದೆ. ಸಮುದ್ರ ಮಟ್ಟದಿಂದ 2800 ಅಡಿ ಎತ್ತರಕ್ಕೆ ನೀರು ಹರಿಸಲು ವಿದ್ಯುತ್ ಮತ್ತು ಶ್ರಮ ಬೇಕು. ಅಪಾರ ಅರಣ್ಯ ನಾಶವಾಗಲಿದೆ. ಅಲ್ಲದೆ ಪೂರ್ವಾಭಿಮುಖವಾಗಿ ನದಿಯನ್ನು ತಿರುಗಿಸುವುದು ತಪ್ಪು ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ ⇒ ಪಡಿತರ ಚೀಟಿದಾರರೆ ಗಮನಿಸಿ, ಆ.31 ಕೊನೆ ದಿನ, ತಪ್ಪಿದರೆ ಪಡಿತರ ಸಿಗಲ್ಲ
2019ರಲ್ಲಿಯು ಶರವಾತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ರೂಪಿಸಲಾಗಿತ್ತು. ಆಗ ತೀವ್ರ ಹೋರಾಟವಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಯೋಜನೆ ಕೈ ಬಿಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದರು. ಈಗ ಯೋಜನೆ ಪುನಃ ಮುನ್ನಲೆಗೆ ಬಂದಿದೆ. ರಕ್ತ ಕೊಟ್ಟೇವು, ನೀರು ಹರಿಸಲ್ಲ ಅಂದವರು ಈಗ ಧ್ವನಿ ಎತ್ತಬೇಕಿದೆ ಎಂದು ಹಾಲಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ರಾಜನಂದಿನಿ, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ್ ಪ್ರಸಾದ್, ಸತೀಶ್.ಕೆ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ ⇒ ಬೆಳಗ್ಗೆ ಎದ್ದು ಬಂದಾಗ ಓಪನ್ ಆಗಿತ್ತು ಮನೆ ಬಾಗಿಲು, ರೂಂಗೆ ಹೋದಾಗ ಕುಟುಂಬದವರಿಗೆ ಆಘಾತ, ಆಗಿದ್ದೇನು?