ಶಿವಮೊಗ್ಗ ಲೈವ್.ಕಾಂ | TUMARI NEWS | 8 ಸೆಪ್ಟೆಂಬರ್ 2021
ಸಿಗಂದೂರು ಲಾಂಚ್’ನಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಆಗ್ರಹ ಪುನಃ ಮುನ್ನಲೆಗೆ ಬಂದಿದೆ.
ಅಂಬಾರಗೋಡ್ಲು – ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್’ನಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಸ್ಥಳೀಯರಿಗೆ ಅನುಕೂಲ ಮಾಡಿಕೊಡುವುದೆ ಈ ಲಾಂಚ್’ಗಳ ಮೂಲ ಉದ್ದೇಶವಾಗಿದೆ ಎಂದು ಜನಪರ ಹೋರಾಟ ವೇದಿಕೆ ಮುಖಂಡ ಪ್ರದೀಪ್ ಮಾವಿನಕೈ ಒತ್ತಾಯಿಸಿದ್ದಾರೆ.
ಬಾಣಂತಿ ಇದ್ದ ವಾಹನ ಹತ್ತಿಸಲಿಲ್ಲ
ಇತ್ತೀಚೆಗೆ ಲಾಂಚ್ ಸಿಬ್ಬಂದಿ ಸ್ಥಳೀಯ ಬಾಣಂತಿ ಇದ್ದ ವಾಹವನ್ನು ಲಾಂಚ್’ಗೆ ಹತ್ತಿಸಿಲ್ಲ. ಅದರ ಬದಲು ಪ್ರವಾಸಿಗರಿದ್ದ ವಾಹವನ್ನು ಲಾಂಚ್’ಗೆ ಹತ್ತಿಸಿದ್ದಾರೆ. ಬಾಣಂತಿ ಮತ್ತು ಮಗು ಬಹು ಹೊತ್ತು ಕಾಯುವ ದುಸ್ಥಿತಿ ಉಂಟಾಯಿತು. ಈ ವೇಳೆ ಗಲಾಟೆಯಾಗಿದೆ. ಇಂತಹ ಘಟನೆಗಳ ಬಗ್ಗೆ ತಾಲೂಕು ಆಡಳಿತ ಗಮನ ವಹಿಸಬೇಕು. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ
ಈ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಲಾಂಚ್ ಸಿಬ್ಬಂದಿ ಪ್ರವಾಸಿಗರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಸ್ಥಳೀಯರು, ಪ್ರವಾಸಿಗರು ಮತ್ತು ಲಾಂಚ್ ಸಿಬ್ಬಂದಿ ಮಧ್ಯೆ ಜಗಳ ಆಗುತ್ತಿದೆ. ಈ ಬಗ್ಗೆ ತಾಲೂಕು ಆಡಳಿತ ಗಮನ ವಹಿಸಬೇಕು. ಸ್ಥಳೀಯರ ಅನುಕೂಲಕ್ಕಾಗಿ ಲಾಂಚ್ ಬಿಡಲಾಗಿದೆ. ಹಾಗಾಗಿ ಸ್ಥಳೀಯರಿಗೆ ಮೊದಲು ಆದ್ಯತೆ ನೀಡಬೇಕು ಎಂದು ಪ್ರದೀಪ್ ಮಾವಿನಕೈ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಸುರಕ್ಷಿತವಾಗಿ ದಡ ಸೇರಿಸುತ್ತಿದ್ದ ಲಾಂಚ್ ಸಿಬ್ಬಂದಿ ಬದುಕು ನಡು ನೀರಿಗೆ, ಕಾರಣವೇನು?
ಎರಡು ಬದಿಯಲ್ಲಿ ಪೂಲೀಸರು ಇಲ್ಲ
ಅಂಬಾರಗೋಡ್ಲು – ಕಳಸವಳ್ಳಿ ದಡದಲ್ಲಿ ಪೊಲೀಸರ ಕೊರತೆ ಇದೆ. ಪೊಲೀಸರನ್ನು ನಿಯೋಜಿಸಿ, ಸಮರ್ಪಕವಾಗಿ ವ್ಯವಸ್ಥೆ ಮಾಡಿದರೆ ಅನುಕೂಲ ಆಗಲಿದೆ. ಜಿಲ್ಲಾಡಳಿತ ಕೂಡಲೆ ಈ ಬಗ್ಗೆ ಗಮನ ವಹಿಸಬೇಕು ಎಂದು ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯಾನಾರಾಯಣ ಗ್ರಹಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200