ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SAGARA : ಪಟ್ಟಣದ ಬಡಾವಣೆಯೊಂದರಲ್ಲಿ (Layout) ಅಪರೂಪದ ತಳಿಯ ಕಾಡುಪಾಪ ಕಾಣಿಸಿಕೊಂಡಿದೆ. ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅದನ್ನು ಕಾಡಿಗೆ ಬಿಡಲಾಯಿತು.
ಸಾಗರ – ಸಿಗಂದೂರು (Sigandur) ರಸ್ತೆಯ ಲೇ ಔಟ್‌ನ ಬೇಲಿಯ ನಡುವೆ ಈ ಕಾಡುಪಾಪ ಕಾಣಿಸಿಕೊಂಡಿದೆ. ಇಂಗ್ಲಿಷ್‌ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಎಂದು ಕರೆಯಲಾಗುತ್ತದೆ. ನಿಧಾನವಾಗಿ ಸಾಗುವ, ಓಡಲು, ಹಾರಲು ಬಾರದ ಸೌಮ್ಯ ಸ್ವಭಾವದ ಪ್ರಾಣಿ ಎಂದು ಗುರುತಿಸಲಾಗಿದೆ.
‘ದಟ್ಟ ಕಾಡಿನಲ್ಲಿ ಕಾಣಿಸುವ ಕಾಡುಪಾಪ ಪಟ್ಟಣದ ಸಮೀಪ ಬಂದಿರುವುದು ಆಶ್ಚರ್ಯ. ಹಗಲು ವೇಳೆ ಇದಕ್ಕೆ ಕಣ್ಣು ಕಾಣಿಸುವುದಿಲ್ಲ. ರಾತ್ರಿ ವೇಳೆ ಮಿಡತೆ, ಚಿಟ್ಟೆಗಳನ್ನು ತಿಂದು ಇವು ಬದುಕುತ್ತವೆ’ ಎಂದು ಅಖಿಲೇಶ್ ಚಿಪ್ಪಳಿ ತಿಳಿಸಿದರು.
ಇದನ್ನೂ ಓದಿ – ಬಸ್ ಹತ್ತಿ ಸೀಟ್‌ನಲ್ಲಿ ಕುಳಿತು ಬ್ಯಾಗ್‌ನತ್ತ ನೋಡಿದ ಮಹಿಳೆಗೆ ಕಾದಿತ್ತು ಆಘಾತ, ಠಾಣೆಗೆ ದೌಡು