ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 1 AUGUST 2023
SAGARA : ನಿವೃತ್ತ ನೌಕರರೊಬ್ಬರನ್ನು (Retired Employee) ತಮ್ಮ ಕಾರಿನಲ್ಲಿ ಮನೆವರೆಗೆ ಕರೆದೊಯ್ದು ಹಿರಿಯ ಅಧಿಕಾರಿಯೊಬ್ಬರು ಬೀಳ್ಕೊಡುಗೆ ನೀಡಿದ್ದಾರೆ. ಸಾಗರ ಉಪ ವಿಭಾಗೀಯ ಕಚೇರಿಯಲ್ಲಿ ಈ ವಿಭಿನ್ನ ಬೀಳ್ಕೊಡುಗೆ ನಡೆಯಿತು.

ಯಾರಿಗೆ ಬೀಳ್ಕೊಡುಗೆ?
ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಡಿ ದರ್ಜೆ ನೌಕರರಾಗಿದ್ದ ಕೃಷ್ಣಪ್ಪ ಅವರು ಜು.31ರಂದು ನಿವೃತ್ತರಾದರು. ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಸನ್ಮಾನ ಮಾಡಿ, ಗೌರವ ಸಲ್ಲಿಸಿದರು. ಅಲ್ಲದೆ ಎಲ್ಲರು ನಿಂತು ಸಾಮೂಹಿಕ ಫೋಟೊ ಕ್ಲಿಕ್ಕಿಸಿಕೊಂಡರು. ತಮ್ಮ ಕಚೇರಿ ಸಿಬ್ಬಂದಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಕೂಡ ಪಾಲ್ಗೊಂಡಿದ್ದರು.

ಕಾರಿನಲ್ಲಿ ಮನೆವರೆಗೆ ಕರೆದೊಯ್ದರು
ಸಮಾರಂಭದ ಬಳಿಕ ಮನೆಗೆ ತೆರಳಲು ಸಿದ್ದವಾಗುತ್ತಿದ್ದ ಕೃಷ್ಣಪ್ಪ ಅವರಿಗೆ ಅಚ್ಚರಿ ಕಾದಿತ್ತು. ಕಚೇರಿಯಿಂದ ಹೊರ ಬರುತ್ತಿದ್ದಂತೆ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ಕಾರಿನಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದರು. ಕೃಷ್ಣಪ್ಪ ಅವರು ಸಂಕೋಚದಿಂದಲೆ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತರು. ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ಹಿಂಬದಿ ಸೀಟಿನಲ್ಲಿ ಕುಳಿತರು. ಕೃಷ್ಣಪ್ಪ ಅವರ ಮನೆವರೆಗೆ ಕರೆದೊಯ್ದು ಬೀಳ್ಕೊಡುಗೆ ನೀಡಿದರು.
ಪಲ್ಲವಿ ಸಾತೇನಹಳ್ಳಿ ಅವರ ಈ ನಡೆ ಕಚೇರಿ ಸಿಬ್ಬಂದಿಯ ಮನ ಗೆದ್ದಿತು. ಅಲ್ಲದೆ ಕೃಷ್ಣಪ್ಪ ಅವರು ಕುಟುಂಬದವರಿಗು ಖುಷಿ ನೀಡಿತು.
ಇದನ್ನೂ ಓದಿ – ದಾರಿ ಮಧ್ಯೆ ಅಜ್ಜಿ ಜೊತೆ MLA ಮಾತು, ಮುಗ್ಧ ಉತ್ತರಗಳಿಗೆ ನೆಟ್ಟಿಗರು ಫಿದಾ, ವಿಡಿಯೋಗೆ ಮೆಚ್ಚುಗೆ
ಕಚೇರಿ ಸಿಬ್ಬಂದಿ ಮಂಜುಳಾ ಭಜಂತ್ರಿ, ಕಲ್ಲಪ್ಪ ಮೆಣಸಿನಹಾಳ್, ದೇವರಾಜ್, ಪ್ರಶಾಂತ್, ಗುರು, ಮಂಜುನಾಥ್ ಸೇರಿದಂತೆ ಹಲವರು ಇದ್ದರು.
.jpeg)
LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





