ಶಿವಮೊಗ್ಗದ ಲೈವ್.ಕಾಂ | KARGAL NEWS | 4 ಫೆಬ್ರವರಿ 2022
ಚಲಿಸುತ್ತಿದ್ದ ಬಸ್ ಹತ್ತುವ ಪ್ರಯತ್ನದಲ್ಲಿ ವಿದ್ಯಾರ್ಥಿಯೊಬ್ಬ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ. ಕಾರ್ಗಲ್ ಮುಖ್ಯ ಪೇಟೆಯಲ್ಲಿ ಘಟನೆ ಸಂಭವಿಸಿದೆ.
ಕಾರ್ಗಲ್ ಪ್ರೌಢಶಾಲೆಯ ವಿದ್ಯಾರ್ಥಿ ವೈಭವ್ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದಾತ. ಈ ದಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೇಗಾಯ್ತು ಘಟನೆ?
ವೈಭವ್ ಸಮೀಪದ ಇಡುವಾಣಿಯ ಚಿಪ್ಪಲಮಕ್ಕಿಗೆ ಖಾಸಗಿ ಬಸ್ಸಿನಲ್ಲಿ ಓಡಾಡುತ್ತಾನೆ. ಸೋಮವಾರ ತರಗತಿ ಮುಗಿಸಿಕೊಂಡು ಬಸ್ ಹತ್ತಲು ಬಂದಾಗ ಆಗ ತಾನೆ ಬಸ್ ಸ್ಟ್ಯಾಂಡ್‌ನಿಂದ ಬಸ್ ಹೊರಟಿತ್ತು. ಆದರೂ ಚಲಿಸುತ್ತಿದ್ದ ಬಸ್ ಹತ್ತಲು ಹೋದ ವೈಭವ್ ವಿಫಲನಾಗಿ ಬಸ್‌ನಿಂದ ಹಾರಿ ಬಿದ್ದಿದ್ದಾನೆ.
ರಸ್ತೆ ಮೇಲೆ ವೈಭವ್ ಅಂಗಾತ ಬಿದ್ದಿದ್ದಾನೆ. ಬ್ಯಾಗ್ ಇದ್ದಿದ್ದರಿಂದ ಬೆನ್ನು ಮತ್ತು ತಲೆಗೆ ಯಾವುದೆ ಪೆಟ್ಟು ಬಿದ್ದಿಲ್ಲ. ಇನ್ನು, ಬಸ್ಸಿನ ಹಿಂಬದಿಯಲ್ಲಿ ಬರುತ್ತಿದ್ದ ಆಟೋ ರಸ್ತೆ ಬಲ ಭಾಗದಲ್ಲಿತ್ತು. ಇದರಿಂದ ವೈಭವ್ ಪಾರಾದಂತಾಗಿದೆ.
ವೈಭವ್, ಬೀಳುವ ದೃಶ್ಯ ಕಂಡು ಸ್ಥಳೀಯರೆ ಬೆಚ್ಚಿಬಿದ್ದಿದ್ದಾರೆ. ಈ ದೃಶ್ಯ ಮಂದಾರ ಕಂಫರ್ಟ್‌ನ ಮಳಿಗೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
About Shivamogga Live | Shimoga Police
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200