ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

Published On : ಮಾರ್ಚ್ 18, 2026

Published By : ನಿತಿನ್‌ ಆರ್‌.ಕೈದೊಟ್ಲು 

ಸಾಗರ: ವಿದ್ಯಾರ್ಥಿಗೆ ಅಮಾನವೀಯವಾಗಿ ದೈಹಿಕ ದಂಡನೆ ನೀಡಿದ ಆರೋಪದ ಹಿನ್ನೆಲೆ ಸಾಗರ ತಾಲೂಕಿನ ಶೆಡ್ತೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ (teacher) ಪ್ರಮೋದ್‌ ಸಣ್ಣಕ್ಕಿ ಎಂಬುವರನ್ನು ಅಮಾನತುಗೊಳಿಸಿ ಡಿಡಿಪಿಐ ಮಂಜುನಾಥ ಸ್ವಾಮಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ – ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ಶಿಕ್ಷಕ ಪ್ರಮೋದ ಅವರು ಮಾರ್ಚ್‌ 12ರಂದು 7ನೇ ತರಗತಿ ವಿದ್ಯಾರ್ಥಿಗೆ ದೈಹಿಕ ಹಲ್ಲೆ ನಡೆಸಿದ್ದರು. ಪ್ರಾರ್ಥನೆ ಸಮಯದ ನಂತರ ವಿದ್ಯಾರ್ಥಿಯನ್ನು ವಿಚಾರಿಸುವ ನೆಪದಲ್ಲಿ ಶಿಕ್ಷಕರು ಈ ರೀತಿ ದಂಡನೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಡಿಡಿಪಿಐ ಅವರು ಪ್ರಮೋದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ, ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚಿಸಲಾಗಿದೆ.

Sunrise Facility Services, Sri sai Trust Shimoga

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 18, 2026

Leave a Comment