ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಸಾಗರ ಜಂಬಗಾರು – ಆನಂದಪುರ ಮತ್ತು ಕುಂಸಿ – ಆನಂದಪುರ ರೈಲ್ವೆ ನಿಲ್ದಾಣಗಳ (Railway Stations) ನಡುವೆ ರೈಲ್ವೆ ಲೆವಲ್ ಕ್ರಾಸಿಂಗ್‌ಗಳಲ್ಲಿ ತಾಂತ್ರಿಕ ಪರಿಶೀಲನೆ ನೆಡಸಲಾಗುತ್ತಿದೆ. ಈ ಹಿನ್ನೆಲೆ ಸೆ.13 ರಿಂದ 15 ಹಾಗೂ ಸೆ.20 ರಿಂದ 22ರ ವರೆಗೆ ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸೆ.13 ರಿಂದ 15ರವರೆಗೆ ಸಾಗರ ಜಂಬಗಾರು – ಆನಂದಪುರ ಮಧ್ಯೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್, ಪರಿಶೀಲನೆ ಮಾಡುವಾಗ ವಾಹನಗಳು ಸೊರಬ ರಸ್ತೆಯ ಮೂಲಕ ರೈಲ್ವೆ ಲೆವೆಲ್ ಕ್ರಾಸ್ ಗೇಟ್ 130ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.
ಇದನ್ನೂ ಓದಿ – JOBS – ಶಿವಮೊಗ್ಗದ ಶೋ ರೂಂ ಮತ್ತು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವಿವಿಧ ಕೆಲಸ ಇದೆ
ಸೆ.20 ರಿಂದ ಸೆ. 22ರವರೆಗೆ ಕುಂಸಿ – ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 105ರನ್ನು ತೆರೆದು ತಾಂತ್ರಿಕವಾಗಿ ಪರಿಶೀಲನೆ ಮಾಡುಲಾಗುತ್ತದೆ. ಈ ಸಂದರ್ಭ ವಾಹನಗಳು ಆನಂದಪುರ – ಎಡೇಹಳ್ಳಿ – ಹೆಬ್ಬೆಲ್ ರಸ್ತೆ- ಆಡೂರು -ಕೋಣನತಲೆ- ಹೊಸೂರು ಮೂಲಕ ರೈಲ್ವೆ ಲೆವಲ್ ಕ್ರಾಸ್ ಗೇಟ್ ನಂ. 104ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.