ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021
ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಹೊರಟಿದ್ದ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ರೈಲು ಸುಮಾರು 20 ನಿಮಿಷ ತಡವಾಗಿ ಹೊರಟಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಂತ್ರಿಕ ದೋಷದಿಂದ ತಾಳಗುಪ್ಪ ನಿಲ್ದಾಣದಲ್ಲಿಯೇ ರೈಲು ನಿಂತಿತ್ತು. ಇದರಿಂದ ಪ್ರಯಾಣಿಕರಲ್ಲಿ ಗೊಂದಲ ನಿರ್ಮಾಣವಾಗಿತ್ತು. ಬೆಳಗ್ಗೆ 11.15ಕ್ಕೆ ತಾಳಗುಪ್ಪ – ಶಿವಮೊಗ್ಗ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಬೇಕಿತ್ತು.
ಸುಡು ಬಿಸಿಲಲ್ಲೇ ನಿಂತ ವಾಹನಗಳು
ರೈಲು ಹೊರಡುವ ಸಮಯವಾದ್ದರಿಂದ ಪಕ್ಕದ ರಸ್ತೆಯಲ್ಲಿದ್ದ ಗೇಟ್ ಬಂದ್ ಮಾಡಲಾಗಿತ್ತು. ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ಹೊರಡುವುದು ತಡವಾಯ್ತು. ಆದರೆ ಅಧಿಕಾರಿಗಳು ರೈಲ್ವೆ ಗೇಟ್ ತೆಗೆಯಲಿಲ್ಲ. ಇದರಿಂದಾಗಿ ವಾಹನ ಸವಾರರು ಬಿಸಿಲಿನಲ್ಲಿ ಬಹು ಹೊತ್ತು ನಿಲ್ಲಬೇಕಾಯ್ತು.
ಹೈವೇ ರಸ್ತೆಯಾಗಿದ್ದರಿಂದ ವಾಹನಗಳು ದೊಡ್ಡ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ರೈಲ್ವೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.