ಊರಿನಿಂದ ಸಾಗರದ ಮನೆಗೆ ಮರಳಿದ ಮೆಸ್ಕಾಂ ನಿವೃತ್ತ ಇಂಜಿನಿಯರ್‌ ಕುಟುಂಬಕ್ಕೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 29 NOVEMBER 2023

SAGARA : ಮೆಸ್ಕಾಂ ನಿವೃತ್ತ ಇಂಜಿನಿಯರ್ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ನಗದು ಹಾಗೂ ಆಭರಣಗಳ ದೋಚಿರುವ ಘಟನೆ ಪಟ್ಟಣದ ವಿಜಯ ನಗರದ ಬಾಪಟ್ ಕಲ್ಯಾಣ ಮಂಟಪ ಹಿಂಭಾಗದಲ್ಲಿ ನಡೆದಿದೆ.

ನಿವೃತ್ತ ಇಂಜಿನಿಯರ್ ನಾಗರಾಜ್ ಎಂಬುವರು ಕುಟುಂಬ ಸಮೇತ ಕಾರ್ಯಕ್ರಮವೊಂದಕ್ಕೆ ಸಿದ್ದಾಪುರಕ್ಕೆ ಹೋಗಿದ್ದರು. ಸೋಮವಾರ ಬೆಳಗ್ಗೆ ಹಿಂದಿರುಗಿದಾಗ ಮನೆಯ ಬಾಗಿಲು ಒಡೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬೆಡ್‌ರೂಮ್‌ನಲ್ಲಿದ್ದ ಎರಡು ಬೀರುವಿನ ಬಾಗಿಲು ಒಡೆದು 25 ಸಾವಿರ ರೂ. ನಗದು, ಚಿನ್ನ, ಬೆಳ್ಳಿ ಆಭರಣ, ರೇಷ್ಮೆ ಸೀರೆಗಳು ಸೇರಿದಂತೆ 9 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ ಎಂದು ದೂರು ನೀಡಿದ್ದಾರೆ. ‌

ಇದನ್ನೂ ಓದಿ – ಗೋ ಪೂಜೆ ಸಂದರ್ಭ ಚಿನ್ನದ ಸರ ನುಂಗಿದ ಹಸು, ಶಸ್ತ್ರಚಿಕಿತ್ಸೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 29, 2023

Leave a Comment