ಸಿಗಂದೂರು ಲಾಂಚ್‌, ವಾಹನ ಸಾಗಟ ಸ್ಥಗಿತ, ಸ್ಥಳೀಯರಲ್ಲಿ ಆತಂಕ, ಪ್ರವಾಸಿಗರಿಗು ಸಂಕಷ್ಟ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 JUNE 2024

SAGARA : ಶರಾವತಿ ಹಿನ್ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ ಜೂ.5ರಿಂದ ಕಳಸವಳ್ಳಿ – ಅಂಬಾರಗೋಡ್ಲು ಲಾಂಚ್‌ನಲ್ಲಿ (Sigandur Launch) ವಾಹನ ಸಾಗಾಟ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.

ಲಾಂಚ್‌ನಲ್ಲಿ ವಾಹನ ಸಾಗಾಟ ಸ್ಥಗಿತಗೊಳಿಸಿರುವುದರಿಂದ ಕರೂರು ಹೋಬಳಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ಆರಂಭವಾಗಿ ನೀರಿನ ಮಟ್ಟ ಏರಿದಲ್ಲಿ ಮಾತ್ರ ಮತ್ತೆ ವಾಹನ ಸಾಗಾಟ ಪುನಾರಂಭವಾಗಲಿದೆ. ಶರಾವತಿ ನದಿಯ ಹಿನ್ನೀರು ಪ್ರಮಾಣ ತೀವ್ರ ಕುಸಿತ ಕಂಡಿದೆ. ಹಾಗಾಗಿ ಹಸಿರುಮಕ್ಕಿ – ಮುಪ್ಪಾನೆ ಲಾಂಚ್‌ ಸೇವೆ ನಿಲ್ಲಿಸಲಾಗಿದೆ.

ಇದನ್ನೂ ಓದಿ – ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ನಿರಾಸೆ, ಕಾರಣವೇನು?

ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದಾಗಿ ಸಿಗಂದೂರು ಲಾಂಚ್‌ ಸೇವೆ ಸ್ಥಗಿತವಾಗಿತ್ತು. ಇದರಿಂದ ಜನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿತ್ತು. ಈ ಬಾರಿ ಉತ್ತಮ ಮಳೆಯಾದರೆ ಲಾಂಚ್‌ ಸೇವೆಗೆ ಅನುಕೂಲ ಆಗಲಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment