ಶಿವಮೊಗ್ಗ ಲೈವ್.ಕಾಂ | 12 ಜೂನ್ 2019
ಸಾಗರ ತಾಲೂಕು ಆನಂದಪುರ ಮುರುಘಾಮಠದ ಆವರಣದಲ್ಲಿ, ಸೈನಿಕ ತರಬೇತಿ ಪಡೆದ ಮಲೆನಾಡಿನ 26 ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಮಾಜಿ ಯೋಧರ ಕಠಿಣ ಪರಿಶ್ರಮ, ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರಕ್ಕೆ ಫಲ ಸಿಕ್ಕಂತಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಮಾಜಿ ಯೋಧರು ಸ್ಥಾಪಿಸಿದ ಮಲ್ನಾಡ್ ಸೋಲ್ಜರ್ ಅಕಾಡೆಮಿಯಲ್ಲಿ 65 ಯುವಕರು 15 ದಿನ ಕಠಿಣ ತರಬೇತಿ ಪಡೆದಿದ್ದರು. ಈ ಪೈಕಿ 26 ಯುವಕರು, ಗದಗದಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ.
ಮೂವರ ಅವಕಾಶ ಕಿತ್ತುಕೊಂಡ ಹಚ್ಚೆ
ಇಲ್ಲಿ ತರಬೇತಿ ಪಡೆದ 29 ಯುವಕರು ಸೇನೆಗೆ ಆಯ್ಕೆಯಾಗಿದ್ದರು. ಅದರೆ ಅಂತಿಮ ಹಂತದ ಪರಿಶೀಲನೆಯಲ್ಲಿ ಮೂವರನ್ನು ಕೈ ಬಿಡಲಾಗಿದೆ. ಈ ಮೂವರ ತೋಳುಗಳಲ್ಲಿ ಹಚ್ಚೆ ಇತ್ತು. ಇದನ್ನು ಗಮನಿಸಿದ ಆಯ್ಕೆದಾರರು ಮೂವರನ್ನು ಕೈಬಿಟ್ಟಿದ್ದಾರೆ. ಹಾಗಾಗಿ ಅಂತಿಮವಾಗಿ 26 ಯುವಕರು ಸೇನೆಗೆ ನೇಮಕವಾಗಿದ್ದಾರೆ.

ಮಾಜಿ ಯೋಧ ಕಿಶೋರ್ ಭೈರಾಪುರ ಅವರ ನೇತೃತ್ವದಲ್ಲಿ ಮಾಜಿ ಮತ್ತು ಹಾಲಿ ಯೋಧರು, ಆನಂದಪುರದಲ್ಲಿ ಉಚಿತವಾಗಿ ತರಬೇತಿ ನೀಡಿದ್ದರು. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಇನ್ನು, ಇಲ್ಲಿ ತರಬೇತಿ ಹೇಗಿತ್ತು, ಎಷ್ಟೆಲ್ಲ ಕಠಿಣವಾಗಿತ್ತು ಅನ್ನೋ ವಿಡಿಯೋ ರಿಪೋರ್ಟ್ ಇಲ್ಲಿದೆ ನೋಡಿ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]