ಶಿವಮೊಗ್ಗ ಲೈವ್.ಕಾಂ | SHIKARIPURA NEWS | 27 ಆಗಸ್ಟ್ 2020
ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಎಲೆಕ್ಟ್ರೀಷಿಯನ್, ಇಎಂ, ಐಸಿಟಿಎಸ್‌ಎಂ, ಫಿಟ್ಟರ್ ಮತ್ತು ಟರ್ನರ್ ಹಾಗು ಪಿಪಿಪಿ ಅಡಿಯಲ್ಲಿ ಎಲೆಕ್ಟ್ರೀಷಿಯನ್, ಫಿಟ್ಟರ್ ಮತ್ತು ಎಂಎಂವಿ ವೃತ್ತಿಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳೇನು?
ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿಬೇಕು. ಆಸಕ್ತರು ಪ್ರವೇಶಾತಿ ಕುರಿತಾದ ಅರ್ಜಿ ಮತ್ತು ಮತ್ತಿತರ ಮಾಹಿತಿಗೆ www.emptrg.kar.nic.in ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು. ಆಗಸ್ಟ್ ೩೧ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಪಿಪಿಪಿ ಯೋಜನೆ ಅಡಿ ವೃತ್ತಿಗಳಲ್ಲಿ ಪ್ರವೇಶ ಪಡೆಯಲು ಬಯಸುವವರು ೫೦ ರೂ. ಶುಲ್ಕ ಪಾವತಿಸಿ ಕಚೇರಿಯಿಂದ ಅರ್ಜಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9844216900 ಸಂಪರ್ಕಿಸಬಹುದು.