ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIKARIPURA, 6 SEPTEMBER 2024 : ಮನೆಯಲ್ಲಿ ಆಟವಾಡುವಾಗ ಜ್ಯೂಸ್ ಬಾಟಲಿ ಮುಚ್ಚಳ (Cap) ನುಂಗಿದ್ದ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಶಿಕಾರಿಪುರ ತಾಲೂಕು ಹರಗುವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಗಂಗಾಧರಶಾಸ್ತ್ರಿ ಹಿರೇಮಠ, ಅನುಷಾ ದಂಪತಿಯ ಪುತ್ರ ನಂದೀಶ ಮೃತಪಟ್ಟ ಮಗು. ಜ್ಯೂಸ್ ಬಾಟಲಿ ಹಿಡಿದುಕೊಂಡು ಆಟವಾಡುತ್ತಿದ್ದಾಗ ಮುಚ್ಚಳ ನುಂಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಗಂಟಲಿನಿಂದ ಹೊರ ತೆಗೆಯುವ ಪ್ರಯತ್ನ ಮಾಡಿದರೂ ಪ್ರಯೋಜವಾಗಿಲ್ಲ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದಲ್ಲೆ ಮಗು ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದೆ. ವೈದ್ಯರು ಮುಚ್ಚಳ ತೆಗೆದರಾದರೂ ಮಗುವಿನ ಪ್ರಾಣ ಉಳಿಯುವಲ್ಲಿ ಸಮಯ ಮೀರಿತ್ತು. ಅಂತ್ಯ ಸಂಸ್ಕಾರದ ವೇಳೆ ಇಡೀ ಗ್ರಾಮದ ಜನರು ಸೇರಿ ಶೋಕ ವ್ಯಕ್ತಪಡಿಸಿದರು.
ಇದನ್ನೂ ಓದಿ » ಫೋನ್ ಬಂತು ಅಂತಾ ಎಚ್ಚರವಾಗಿ ಪಕ್ಕದ ಸೀಟ್ ಕಡೆ ಕಣ್ಣು ಹಾಯಿಸಿದ ಇಂಜಿನಿಯರ್‌ಗೆ ಕಾದಿತ್ತು ಆಘಾತ