ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019
ಭದ್ರಾವತಿ ಬಿಟ್ಟು ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರಿದ್ದಾರೆ. ಹಾಗಾದರೆ, ಅವರೆಲ್ಲ ಗೂಂಡಾಗಳೇ ಅಂತಾ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಗೂಂಡಾ ರಾಜ್ಯ ಅಂತಾ ಶಾಸಕ ಕೆ.ಎಸ್.ಈಶ್ವರಪ್ಪ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಶಿಕಾರಳಕೊಪ್ಪದಲ್ಲಿ ತೀ.ನಾ.ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಅಭಿನವ್ ಖರೆ ಅವರು ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದಾಗ ಈಶ್ವರಪ್ಪ ಅವರು ಯಾವುದೇ ಚಕಾರವೆತ್ತಲಿಲ್ಲ. ಆದರೆ ಅವರು ವರ್ಗಾವಣೆಯಾಗುತ್ತಿದ್ದಂತೆ ಶಿವಮೊಗ್ಗ ಗೂಂಡಾಗಳ ಜಿಲ್ಲೆಯಾಗಿದೆ ಅಂತಾ ಆರೋಪಿಸಿದ್ದಾರೆ. ಜಿಲ್ಲೆಯ ಭದ್ರಾವತಿ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರದಲ್ಲೂ ಬಿಜೆಪಿ ಶಾಸಕರೇ ಇದ್ದಾರೆ. ಅವರೆಲ್ಲ ಗೂಂಡಾಗಳೇ ಎಂದು ಪ್ರಶ್ನಿಸಿದರು.
ರೈತರ ಮೇಲೆ ಗಧಾಪ್ರಹಾರ, ಬಿಜೆಪಿ ಸಂಸದರು ಮೌನ
ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿಲ್ಲ. ಒಂದೆರಡು ಎಕರೆಯಲ್ಲಿ ಅನ್ನ ಬೆಳೆದು ದೇಶಕ್ಕೆ ಕೊಡುತ್ತಿದ್ದಾರೆ. ಆದರೆ ಇವರಿಗೆ ಸಮಸ್ಯೆಯಾಗಿದ್ದರೂ, ಬಿಜೆಪಿ ಸಂಸದರು ಮೌನ ವಹಿಸಿದ್ದಾರೆ ಎಂದು ತೀ.ನಾ.ಶ್ರೀನಿವಾಸ್ ಆರೋಪಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]