ಶಿವಮೊಗ್ಗ ಲೈವ್.ಕಾಂ | SHIKARIPURA NEWS | 16 ಆಗಸ್ಟ್ 2020
ಶಿಕಾರಿಪುರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ಗೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಇವತ್ತು ಭೇಟಿ ನೀಡಿದ್ದರು. ಈ ವೇಳೆ ಸೋಂಕಿತರೊಬ್ಬರು ಜಿಲ್ಲಾಧಿಕಾರಿ ಮುಂದೆ ವಿಶೇಷ ಬೇಡಿಕೆ ಮುಂದಿಟ್ಟು ಎಲ್ಲರು ನಗುವಂತೆ ಮಾಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಂಬಾರಗೊಪ್ಪ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇವತ್ತು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ಭೇಟಿ ನೀಡಿದ್ದರು.
ವ್ಯವಸ್ಥೆ ಪರಿಶೀಲನೆ, ಸೋಂಕಿತರ ಜತೆ ಚರ್ಚೆ
ಕೋವಿಡ್ ಕೇರ್ ಸೆಂಟರ್‌ನ ವ್ಯವಸ್ಥೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಶಿಕಾರಿಪುರ ತಹಶೀಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಜೊತೆಗೆ ಚರ್ಚೆ ನಡೆಸಿದರು. ಬಳಿಕ ಕ್ವಾರಂಟೈನ್‌ನಲ್ಲಿ ಇರುವ ಸೋಂಕಿತರೊಂದಿಗೆ ಚರ್ಚಿಸಿದರು. ಸೌಲಭ್ಯಗಳ ಕುರಿತು ವಿಚಾರಿಸಿದರು.
ವಿಶೇಷ ಬೇಡಿಕೆ ಮುಂದಿಟ್ಟ ಸೋಂಕಿತ
ಸೌಲಭ್ಯ, ಚಿಕಿತ್ಸೆ ಕುರಿತು ಸೋಂಕಿತರಿಗೆ ಜಿಲ್ಲಾಧಿಕಾರಿ ವಿಚಾರಿಸುತ್ತಿದ್ದಾಗ ವ್ಯಕ್ತಿಯೊಬ್ಬರು ವಿಶೇಷ ಬೇಡಿಕೆಯಿಟ್ಟರು. ಅಧಿಕಾರಿಗಳೆಲ್ಲರು ನಗುವಂತಾಯಿತು. ಜಿಲ್ಲಾಧಿಕಾರಿ ಅವರು ಮರು ಉತ್ತರ ನೀಡಲಾಗದೆ ವಿಷಯ ಬದಲಾಯಿಸುವಂತಾಯಿತು. ಸೋಂಕಿತ ವ್ಯಕ್ತಿಯೊಬ್ಬರಿಗೆ ಮದುವೆಯಾಗಿದೆಯಾ ಎಂದು ಜಿಲಾಧಿಕಾರಿ ಪ್ರಶ್ನಿಸಿದರು. ಅದಕ್ಕೆ ಅವರು ನನ್ನ ಹೆಂಡತಿ ಇವತ್ತು ಬಂದರಷ್ಟೇ ಮನೆಗೆ ಸೇರಿಸುತ್ತೇನೆ ಅಂತಿದ್ದಾಳೆ ಎಂದು ಹೇಳಿ ತನ್ನನ್ನು ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.
ಡಿಸಿ ಭೇಟಿ, ವಿಶೇಷ ಮನವಿಯ ವಿಡಿಯೊ ರಿಪೋರ್ಟ್ ಇಲ್ಲಿದೆ.
https://www.facebook.com/liveshivamogga/videos/249936925969902/?t=2
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]