SHIVAMOGGA LIVE NEWS
SHIMOGA / SHIRALAKOPPA | ಶಿರಾಳಕೊಪ್ಪದಲ್ಲಿ ಇವತ್ತು ಬೆಳಗಿನ ಜಾವ ಭೂಮಿ ಕಂಪಿಸಿದ (earth quake) ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದರು. ಇದರಿಂದ ಜನರು ಆತಂಕಕ್ಕೀಡಾಗಿದ್ದರು. ಆದರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಭೂಕಂಪನವಾಗಿಲ್ಲ ಎಂದು ವರದಿ ನೀಡಿದೆ. ಭೂ ವಿಜ್ಞಾನಿಗಳು ಕೂಡ ಇದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿರಾಳಕೊಪ್ಪ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬೆಳಗ್ಗೆ 3.55ರ ಹೊತ್ತಿಗೆ ಘಟನೆ ಸಂಭವಿಸಿದೆ ಎಂದು ಹೇಳಲಾಗಿತ್ತು. ಕೆಲವರು ಮನೆಯಿಂದ ಹೊರ ಬಂದು ತಮಗಾದ ಅನುಭವವನ್ನು ಪರಸ್ಪರ ಹಂಚಿಕೊಂಡಿದ್ದರು. ಆದರೆ ಇದು ಭೂಕಂಪನವಲ್ಲ ಎಂದು ಸರ್ಕಾರ ಮತ್ತು ಜಿಲ್ಲಾಡಳಿತ ತಿಳಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಶಿರಾಳಕೊಪ್ಪಕ್ಕೆ ಜಿಲ್ಲಾಧಿಕಾರಿ ಭೇಟಿ (earth quake)
ಭೂಕಂಪನದ ಸುದ್ದಿ ಹರಡುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಶಿರಾಳಕೊಪ್ಪಕ್ಕೆ ಭೇಟಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಜೊತೆ ಸಭೆ ನಡೆಸಿದರು. ಪಟ್ಟಣದಲ್ಲಿ ವಾರ್ಡ್ ವಾರು ಮಾಹಿತಿ ಸಂಗ್ರಹಿಸಲು ತಿಳಿಸಿದ್ದಾರೆ. ಯಾರಿಗೆಲ್ಲ ಭೂಕಂಪನದ (earth quake) ಅನುಭವವಾಗಿದೆ, ಹಾನಿ ಉಂಟಾಗಿದೆಯಾ ಎಂಬುದರ ವರದಿ ಸಿದ್ಧಪಡಿಸಲು ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ.
ಡಿಸಿಗೆ ವರದಿ ಸಲ್ಲಿಕೆ (earth quake)
ಇನ್ನು, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ರಾಜ್ಯದ 14 ಕಡೆ ಭೂಕಂಪನ ಮಾಪನ ಕೇಂದ್ರವನ್ನು ಹೊಂದಿದೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲಿ ಒಂದು ಕೇಂದ್ರವಿದೆ. ಇಲ್ಲೆಲ್ಲು ಕಂಪನ ದಾಖಲಾಗಿಲ್ಲ ಎಂದು ತಿಳಿಸಿದೆ.
‘ಲಿಂಗನಮಕ್ಕಿ ಅಣೆಕಟ್ಟೆ, ಹೇಮಾವತಿ ಅಣೆಕಟ್ಟೆ, ಸೂಪಾ ಅಣೆಕಟ್ಟೆ, ಕೆ.ಆರ್.ಎಸ್.ಅಣೆಕಟ್ಟೆ ಮತ್ತು ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಶಾಶ್ವತ ಭೂಕಂಪನ ಮಾಪನ ಕೇಂದ್ರದ ದತ್ತಾಂಶ ಪರಿಶೀಲಿಸಿದಾಗ ಯಾವುದೆ ರೀತಿಯ ಭೂಕಂಪನ ದಾಖಲಾಗಿಲ್ಲ’ ಎಂದು KSNDMC ಶಿವಮೊಗ್ಗ ಜಿಲ್ಲಾಧಿಕಾರಿಗೆ ವರದಿಯಲ್ಲಿ ತಿಳಿಸಿದೆ.
ಶಿರಾಳಕೊಪ್ಪದಲ್ಲಿ ಭೂ ಕಂಪನವಾಗಿದೆ ಎಂದು ಗೂಗಲ್ ಮ್ಯಾಪ್ ಫೋಟೊ ವೈರಲ್ ಆಗಿತ್ತು. ಮೊಬೈಲ್ ಫೋನ್ ಒಂದರಲ್ಲಿ ಅದರ ಸ್ಕ್ರೀನ್ ಶಾಟ್ ತೆಗೆಯಲಾಗಿದೆ. ಇದರ ಆಧಾರದಲ್ಲಿಯೆ ಹಲವರು ಭೂ ಕಂಪನದ ಎಂದು ನಿರ್ಧರಿಸಿದ್ದರು. ಅಲ್ಲದೆ ಆತಂಕವು ಹೆಚ್ಚಾಗಿತ್ತು. ಭೂಕಂಪನದ ಕುರಿತು ನಿತ್ಯ ಮಾಹಿತಿ ಒದಗಿಸಲು ಸರ್ಕಾರಗಳು ವೆಬ್ ಸೈಟ್ ಗಳನ್ನು ಆರಂಭಿಸಿವೆ. ಭಾರತ ಸರ್ಕಾರದ ನ್ಯಾಷನಲ್ ಸೆಂಟರ್ ಫಾರ್ ಸೆಸ್ಮೊಲಜಿ ಕೇಂದ್ರವು ವೆಬ್ ಸೈಟ್ ನಡೆಸುತ್ತಿದೆ. ಅದರಲ್ಲಿಯು ಶಿರಾಳಕೊಪ್ಪದ ಭೂಕಂಪನದ ಸುದ್ದಿ ಇಲ್ಲ.
ಭೂ ವಿಜ್ಞಾನಿಗಳು ಏನಂತಾರೆ?
ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿದ ಸುದ್ದಿ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಭೂ ವಿಜ್ಞಾನಿ ಅನನ್ಯ ವಾಸುವೇವ್ ಅವರು ಮೂರು ಸಾದ್ಯತೆಗಳನ್ನು ತಿಳಿಸಿದರು.
ಸಾದ್ಯತೆ 1 ಭಾರಿ ಮಳೆಯಿಂದಾಗಿ ಒಂದೇ ಕಡೆ ನೀರು ಹೆಚ್ಚು ಹೊತ್ತು ನಿಂತಿದ್ದು, ಇಂಗುವಾಗ ಸ್ಪೋಟದ ಸದ್ದು ಕೇಳುತ್ತದೆ. ಇದನ್ನು ಹೈಡ್ರೋ ಸೆಸ್ಮಿಸಿಟಿ ಎಂದು ಕರೆಯಲಾಗುತ್ತದೆ. ವಿಜಯಪುರ, ಕೊಡಗು ಜಿಲ್ಲೆಗಳಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಸಂಭವಿಸಿವೆ. ನಿಂತಿದ್ದ ನೀರು ಭೂಮಿಯಲ್ಲಿ ಇಂಗುವಾಗ ಇಂತಹ ಘಟನೆ ನಡೆಯುತ್ತದೆ. ಭೂಮಿಯೊಳಗಿನ ಬಂಡೆಗಳಲ್ಲಿ ಬಿರುಕು ಇದ್ದು, ಅಲ್ಲಿ ನೀರು ಇಂಗಿದಾಗ ಸ್ಪೋಟದಂತ ಸದ್ದು ಕೇಳುವ ಸಾದ್ಯತೆ ಇದೆ.
ಸಾದ್ಯತೆ 2 ಕೆಲವು ಸಂದರ್ಭ 500 ಮೀ., ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿರುತ್ತದೆ. ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಪನವಾಗಿರುತ್ತದೆ. ಇದು ಯಾವುದೆ ಉಪಕರಣಗಳಲ್ಲಿಯು ದಾಖಲಾಗಲು ಸಾದ್ಯವಿಲ್ಲ. ರೈಲು ಹೋಗುವಾಗ ಹಳಿ ಸಮೀಪದಲ್ಲಿ ನಿಂತಾಗ ಆಗುವ ಕಂಪನದಷ್ಟೆ ಅನುಭವವಾಗಿರುತ್ತೆ. ಇದರಿಂದ ಯಾವುದೆ ಅನಾಹುತ ಆಗುವುದಿಲ್ಲ. ಬಹುತೇಕ ಉಪಕರಣಗಳು ರಿಕ್ಟರ್ ಮಾಪಕ 1.8 ಅಥವಾ 2ಕ್ಕಿಂತಲೂ ಹೆಚ್ಚಿನ ಪ್ರಮಾಣ ಕಂಪನಗಳನ್ನಷ್ಟೆ ದಾಖಲಿಸಿಕೊಳ್ಳುತ್ತವೆ.
ಸಾದ್ಯತೆ 3 ಸುತ್ತಮುತ್ತಲು ಕ್ವಾರಿಗಳು ಇದ್ದಲ್ಲಿ ಸ್ಪೋಟಕ ಬಳಸಿದ್ದರಿಂದ ಬಂಡೆಗಳಲ್ಲಿ ಬಿರುಕು ಮೂಡಿರುತ್ತದೆ. ಇದರಲ್ಲಿ ನೀರು ಸೇರಿ ಹೈಡ್ರೋ ಸೆಸ್ಮಿಸಿಟಿ ಉಂಟಾಗುತ್ತದೆ. ಆಗಲು ಸ್ಪೋಟದಂತ ಶಬ್ದ ಬರುತ್ತದೆ.
ಮಂಗಳೂರಿನಿಂದ ತಜ್ಞರ ಟೀಮ್
ಈ ನಡುವೆ ಭೂಮಿ ಕಂಪನದ ಅನುಭವದ ಕುರಿತು ಪರಿಶೀಲನೆಗೆ ಮಂಗಳೂರಿನಿಂದ ತಜ್ಞರ ತಂಡ ಆಗಮಿಸುತ್ತಿದೆ. ಶಿರಾಳಕೊಪ್ಪದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಮಂಗಳೂರಿನಿಂದ ತಜ್ಞರ ತಂಡ ಭೇಟಿ ನೀಡಲಿದೆ. ಭೂ ಕಂಪಿಸಿದ ಅನುಭವದ ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿರಾಳಕೊಪ್ಪದಲ್ಲಿ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವ, ವೈರಲ್ ಆಯ್ತು ಸ್ಕ್ರೀನ್ ಶಾಟ್
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.