ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 MAY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ELECTION NEWS : ಅನುಮತಿ ಇದ್ದರೂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಸಭೆ ನಡೆಸಲು ಅಡ್ಡಿ ಉಂಟು ಮಾಡಲಾಗಿದೆ. ಏಕಾಏಕಿ ವೇದಿಕೆ ತೆರವು ಮಾಡಲಾಗಿದೆ. ಇದರಿಂದ ಕೆಂಡಾಮಂಡಲರಾದ ಈಶ್ವರಪ್ಪ, ನಡು ರಸ್ತೆಯಲ್ಲೇ ನಿಂತು ಆಕ್ರೋಶ ವ್ಯಕ್ತಪಡಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿರಾಳಕೊಪ್ಪದ ಸೊರಬ ರಸ್ತೆಯ ಮೈಲಾರ ಲಿಂಗೇಶ್ವರ ದೇವಸ್ಥಾನದ ಬಳಿ ಇವತ್ತು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಸಭೆ ಆಯೋಜಿಸಲಾಗಿತ್ತು. ಚುನಾವಣ ಆಯೋಗದಿಂದ ಅನುಮತಿಯನ್ನು ಪಡೆಯಲಾಗಿತ್ತು. ಆದರೂ ಕೆಲವರು ವೇದಿಕೆ ಮತ್ತು ಮೈಕ್ಗಳನ್ನು ಒತ್ತಾಯಪೂರ್ವಕವಾಗಿ ತೆರವು ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈಶ್ವರಪ್ಪ ಅವರು ಸಭೆ ನಿಗದಿಯಾಗಿದ್ದ ಸ್ಥಳಕ್ಕೆ ಬಂದಾಗ ವಿಷಯ ತಿಳಿದು ಕೆಂಡಾಮಂಡಲವಾದರು.
ನಡುರಸ್ತೆಯಲ್ಲೇ ನಿಂತು ಭಾಷಣ, ಆಕ್ರೋಶ
ವೇದಿಕೆ ಇರದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಡು ರಸ್ತೆಯಲ್ಲೆ ತೆರದ ವಾಹನದಲ್ಲಿ ನಿಂತು ಸಭೆ ನಡೆಸಿದರು. ಕಾರ್ಯಕರ್ತರು ಚೇರುಗಳನ್ನು ಎಳೆದು ತಂದು ರಸ್ತೆ, ಪಕ್ಕದ ಖಾಲಿ ಜಾಗದಲ್ಲಿ ಕುಳಿತು ಭಾಷಣ ಕೇಳಿದರು.
ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ಮತ್ತು ಯಡಿಯೂರಪ್ಪ ಅವರ ಕಡೆಯವರು ಹೊಂದಾಣಿಕೆ ಮಾಡಿಕೊಂಡು ವೇದಿಕೆ ತೆರವು ಮಾಡಿಸಿರಬಹುದು. ಚುನಾವಣೆಯಲ್ಲಿ ಗೆದ್ದು ಇದೇ ಜಾಗಕ್ಕೆ ಬಂದು ಈಗ ಭಾಷಣ ಕೇಳುತ್ತಿರುವವರನ್ನು ಸನ್ಮಾನಿಸುತ್ತೇನೆ. ಇನ್ನೊಮ್ಮೆ ನನ್ನ ಕಾರ್ಯಕ್ರಮಗಳಿಗೆ ತೊಂದರೆ ಕೊಟ್ಟರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ – ನಾಳೆ ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಷ್ಟೊತ್ತಿಗೆ ಬರ್ತಾರೆ? ಎಲ್ಲಿಗೆಲ್ಲ ಭೇಟಿ ನೀಡ್ತಾರೆ?