ಶಿಕಾರಿಪುರ: ಹಿರೇಜಂಬೂರು ಗ್ರಾಮದ ಪ್ರಭಣ್ಣ ಕೊಂಡೇರ ಅವರ ಜಮೀನಿನಲ್ಲಿ ಉಳುಮೆ ಮಾಡುವಾಗ 12ನೇ ಶತಮಾನದ ವೀರಗಲ್ಲು (Hero Stone) ಪತ್ತೆಯಾಗಿದೆ. 150 ಸೆಂಟಿ ಮೀಟರ್. ಎತ್ತರ, 9 ಸೆಂ.ಮೀ. ಅಗಲವಿದೆ. ಮೂರು ಹಂತದ ಕೆತ್ತನೆ ಒಳಗೊಂಡಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಇತಿಹಾಸ ಸಂಶೋಧಕ ರಮೇಶ ಬಿ. ಹಿರೇಜಂಬೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗೋವುಗಳು ಮತ್ತು ಸ್ತ್ರೀಯರನ್ನು ರಕ್ಷಿಸಿ ವೀರಮರಣ ಹೊಂದಿದವನಿಗೆ ವೀರಗಲ್ಲು ಮೇಲಿನ ಪಟ್ಟಿಕೆಯಲ್ಲಿ ಆರು ಸಾಲಿನ ಶಾಸನ ಪಾಠವಿರುವುದು ಕಂಡು ಬಂದಿದೆ.
ಕಳಚೂರಿಯ ಚಕ್ರವರ್ತಿ ಬಿಜ್ಜಳ ದೇವನ ಆಡಳಿತ ಅವಧಿಯಲ್ಲಿ ಉದ್ದರೆಯ ಊರಿನವರು ಅಗ್ರಹಾರ ಜಂಬೂರಿನ ಮೇಲೆ ದಾಳಿ ಮಾಡಿ ಜಂಬೂರಿನ ತುರು ಮತ್ತು ಹೆಂಗಸರನ್ನು ಅಪಹರಿಸಲು ಮುಂದಾಗುತ್ತಾರೆ. ಆಗ ಜಂಬೂರಿನ ಸಾಸಿರ್ವರು, ಕುಂಬಾರ ಬಮ್ಮನ ಮಗ ಬೀರನಿಗೆ ಅದನ್ನು ತಡೆಯಲು ಸೂಚಿಸುತ್ತಾರೆ. ಬೀರನು ವೀರಾವೇಶದಿಂದ ಹೋರಾಡಿ ಗ್ರಾಮದ ಗೋವು ಮತ್ತು ಸ್ತ್ರೀಯರನ್ನು ರಕ್ಷಿಸಿ ವೀರಮರಣ ಹೊಂದುತ್ತಾನೆ. ಅವನ ನೆನಪಿಗಾಗಿ ಈ ವೀರಗಲ್ಲನ್ನು ನಿಲ್ಲಿಸಲಾಗಿತ್ತು ಎಂದು ಗೊತ್ತಾಗಿದೆ.
ಇದನ್ನೂ ಓದಿ » ಕುಟುಂಬದವರೆಲ್ಲ ಮಲಗಿದ್ದಾಗಲೇ ಮನೆಯಲ್ಲಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ನಾಪತ್ತೆ, ಹೇಗಾಯ್ತು ಘಟನೆ?
ಕೆಳಗಿನ ಪಟ್ಟಿಕೆಯಲ್ಲಿ ವೀರನು ವೈರಿಗಳೊಡನೆ ಹೋರಾಡುತ್ತಿರುವ ಕೆತ್ತನೆಯಿದೆ. ವೀರನ ಹಿಂದೆ ಗೋವುಗಳ ಚಿತ್ರಣ ಇದೆ. ಎರಡನೇ ಪಟ್ಟಿಕೆಯಲ್ಲಿ ಮಡಿದ ವೀರನನ್ನು ಸುರಾಂಗನೆಯರು ಸ್ವರ್ಗಕ್ಕೆ ಕರೆದೊಯ್ಯುವ ಚಿತ್ರಣವಿದೆ. ಮೇಲಿನ ಪಟ್ಟಿಕೆಯಲ್ಲಿ ಮಡಿದ ವೀರನು ದೇವಲೋಕದಲ್ಲಿ ಕುಳಿತ ಕೆತ್ತನೆಯಿದೆ.

ವೀರಗಲ್ಲಿನ ಎಡಭಾಗದಲ್ಲಿ ಕುಂಬಾರ ವೃತ್ತಿಯ ಚಕ್ರ ಮಡಿಕೆ ಮತ್ತು ದಂಡಗಳ ಚಿಹ್ನೆಗಳನ್ನು ಕೊರೆಯಲಾಗಿದೆ. ದೊರೆತ ವೀರಗಲ್ಲನ್ನು ಪ್ರಭಣ್ಣ ಕೊಂಡೇರ ಹಾಗೂ ಅವರ ಮಕ್ಕಳು ವ್ಯವಸ್ಥಿತವಾಗಿ ನಿಲ್ಲಿಸಿ ಅದನ್ನು ಸ್ಥಳದಲ್ಲಿಯೇ ರಕ್ಷಿಸಿ ಐತಿಹಾಸಿಕ ಪ್ರಜ್ಞೆ ಮೆರೆದಿದ್ದಾರೆ
LATEST NEWS
- ಶಿವಮೊಗ್ಗಕ್ಕೆ ಡಿಜಿಪಿ ಅಲೋಕ್ ಕುಮಾರ್, ಕೇಂದ್ರ ಕಾರಾಗೃಹಕ್ಕೆ ಭೇಟಿ

- ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿದ ವ್ಯಕ್ತಿ ಸಾವು, ಎರಡು ಭಾಗವಾದ ದೇಹ

- ಒಂದು ಮೆಸೇಜ್, ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ₹6.50 ಲಕ್ಷ ಮಾಯ, ಏನಿತ್ತು ಮೆಸೇಜ್ನಲ್ಲಿ?

- ಸಂಸದ ರಾಘವೇಂದ್ರ ಕಾರಿಗೆ ಮತ್ತೊಂದು ಕಾರು ಡಿಕ್ಕಿ, ಆಗಿದ್ದೇನು?

- ಅರಬಿಳಚಿ ದುರಂತ, ಭದ್ರಾ ನಾಲೆಯಲ್ಲಿ ಎರಡನೇ ಮೃತದೇಹ ಪತ್ತೆ

About The Editor
ನಿತಿನ್ ಆರ್.ಕೈದೊಟ್ಲು





