ಬಸ್‌-ಬೈಕ್‌ ಡಿಕ್ಕಿ, ಯುವಕ ಸ್ಥಳದಲ್ಲೆ ಸಾವು, ಹುಟ್ಟುಹಬ್ಬದ ಮರುದಿನವೆ ವಿಧಿಯ ಕರಾಳ ಆಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 AUGUST 2023

SHIKARIPURA : ಕೆಎಸ್‌ಆರ್‌ಟಿಸಿ (KSRTC) ಬಸ್‌, ಬೈಕ್‌ ಮಧ್ಯೆ ಅಪಘಾತ (Accident) ಸಂಭವಿಸಿ ಯುವಕ ಮೃತಪಟ್ಟಿದ್ದಾನೆ. ಮತ್ತೊಬ್ಬ ಯುವಕನಿಗೆ ಗಂಭೀರ ಗಾಯವಾಗಿದೆ. ಪಟ್ಟಣದ ಕುಟ್ರಹಳ್ಳಿ ನೂತನ ಕೆಎಸ್‌ಆರ್‌ಟಿಸಿ ಡಿಪೋ ಎದುರು ಘಟನೆ ಸಂಭವಿಸಿದೆ.

ಪುನೇದಹಳ್ಳಿಯ ಗಜೇಂದ್ರ ಆಚಾರ್ (23) ಮೃತ ದುರ್ದೈವಿ. ಡಿಪೋ ಒಳಗೆ ಬರುತ್ತಿದ್ದ ಬಸ್‌ಗೆ ಬೈಕ್‌ ಡಿಕ್ಕಿಯಾಗಿ ಸವಾರ ಗಜೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ನಂದನ್‌ಗೆ ತೀವ್ರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಕಳೆಗಟ್ಟಿದ ವರ ಮಹಾಲಕ್ಷ್ಮಿ ಹಬ್ಬ, ಹೂವು, ಹಣ್ಣು ಖರೀದಿ ಜೋರು, ಎಷ್ಟಿದೆ ಬೆಲೆ?

ಹುಟ್ಟುಹಬ್ಬದ ಮರುದಿನವೆ ಸಾವು

ಗಜೇಂದ್ರ ಆಚಾರ್ ಬುಧವಾರ ತನ್ನ ಹುಟ್ಟುಹಬ್ಬ (birthday) ಆಚರಿಸಿಕೊಂಡಿದ್ದ. ಮರುದಿನವೆ ವಿಧಿ ಆಟಕ್ಕೆ ಬಲಿಯಾಗಿದ್ದಾನೆ. ಈ ಸಾವಿನಿಂದ ಗಜೇಂದ್ರ ಆಚಾರ್ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಎರಡು ದಿನದ ಹಿಂದೆ ಇದೇ ಜಾಗದಲ್ಲಿ ಬೈಕ್‌ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಈತ ಕೂಡ ಪುನೇದಹಳ್ಳಿಯ ನಿವಾಸಿ.

ಶಿಕಾರಿಪುರ ಠಾಣೆ ಇನ್ಸ್‌ಪೆಕ್ಟರ್‌ ಆರ್‌.ಎಲ್.ಪಾಟೀಲ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment