ಶಿಕಾರಿಪುರದ 28 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ಪ್ರಕಟ, ₹35,000 ದಂಡ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡಾದ ಮಂಜುನಾಯ್ಕ್ (28) ಎಂಬಾತನಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ (life imprisonment) ಹಾಗೂ ₹35,000 ದಂಡ ವಿಧಿಸಿ ಆದೇಶಿಸಿದೆ.

ಏನಿದು ಪ್ರಕರಣ?

ಶಂಕರ್‌ ನಾಯ್ಕ್‌ ಎಂಬುವವರ ಪತ್ನಿ ಜೊತೆಗೆ ಮಂಜುನಾಯ್ಕ್‌ ಸಲುಗೆಯಿಂದ ಇದ್ದ. ಇದಕ್ಕೆ ಶಂಕರ್‌ ನಾಯ್ಕ್‌ ಆಡ್ಡಿ ಆಗುವ ಹಿನ್ನೆಲೆ ಅವರನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದ. 2023ರ ಆಗಸ್ಟ್ 27ರಂದು ರಾತ್ರಿ 10:15ರ ಸುಮಾರಿಗೆ ಶಂಕರ್ ನಾಯ್ಕ್ ಮತ್ತು ಚಂದ್ರಾ ನಾಯ್ಕ್ ಅವರು ಬೈಕಿನಲ್ಲಿ ಹೋಗುತ್ತಿದ್ದಾಗ, ಆರೋಪಿ ಮಂಜುನಾಯ್ಕ್ ತನ್ನ ಕಾರಿನಿಂದ ಅವರಿಗೆ ಡಿಕ್ಕಿ ಹೊಡೆಸಿದ್ದ.

Shivamogga-court-order-for-life-time-imprisonment.

ಚಂದ್ರಾ ನಾಯ್ಕ್ ಅವರ ಮೈಮೇಲೆ ಮತ್ತು ಶಂಕರ್ ನಾಯ್ಕ್ ಅವರ ಕಾಲಿನ ಮೇಲೆ ಕಾರು ಹತ್ತಿತ್ತು. ಘಟನೆಯಲ್ಲಿ ಚಂದ್ರಾ ನಾಯ್ಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಶಂಕರ್ ನಾಯ್ಕ್ ತೀವ್ರವಾಗಿ ಗಾಯಗೊಂಡಿದ್ದರು.

ತನಿಖೆ ಮತ್ತು ತೀರ್ಪು

ಇದನ್ನೂ ಓದಿ – ರವೀಂದ್ರ ನಗರದಲ್ಲಿ ರಾತ್ರಿ ನಿಲ್ಲಿಸಿದ್ದ ಬೈಕ್‌ ಮಿಸ್ಸಿಂಗ್‌, ಆಗಿದ್ದೇನು?

ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು. ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು, ಮಂಜುನಾಯ್ಕ್‌ ವಿರುದ್ಧ ಐಪಿಸಿ ಕಲಂ 302 ಮತ್ತು 307ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

number-1-advt-copy-new.webp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment