ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SANDAL | 09 ಮೇ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶ್ರೀಗಂಧದ ಮರದ ತುಂಡುಗಳನ್ನು ಬೈಕ್’ನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೆ.ಜಿ.ಗಟ್ಟಲೆ ಶ್ರೀಗಂಧದ ತುಂಡುಗಳ ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿಕಾರಿಪುರ ತಾಲೂಕಿನ ಚಿಕ್ಕ ಜಂಬೂರು ಗ್ರಾಮದ ಮುಷ್ತಾಕ್ ಅಹಮದ್ (38) ಮತ್ತು ಫೀರ್ ಖಾನ್ (43) ಬಂಧಿತರು.
ಖಚಿತ ಮಾಹಿತಿ ಮೇಲೆ ದಾಳಿ
ಚಿಕ್ಕ ಜಂಬೂರು ಗ್ರಾಮದ ಕಡೆಯಿಂದ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಶಿರಾಳಕೊಪ್ಪ ಕಾಡೆಗೆ ಸಾಗಣೆ ಮಾಡುತ್ತಿರುವ ಕುರಿತು ಶಿಕಾರಿಪುರ ಡಿವೈಎಸ್’ಪಿ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಈ ಕುರಿತು ಶಿರಾಳಕೊಪ್ಪ ಠಾಣೆ ಪಿಎಸ್ಐ ಅವರಿಗೆ ನಿರ್ದೇಶನ ನೀಡಿ ದಾಳಿ ನಡೆಸಲಾಯಿತು.
ಚಿಕ್ಕಜಂಬೂರು ಮತ್ತು ಕೋಡಿಕೊಪ್ಪ ಗ್ರಾಮದ ನಡುವೆ ಸೇತುವೆ ಬಳಿ ಬೈಕ್ ತಡೆದು ತಪಾಸಣೆ ನಡೆಸಲಾಯಿತು. ಈ ವೇಳೆ 17 ಕೆ.ಜಿ 660 ಗ್ರಾಂ ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ. ಇವುಗಳ ಮೌಲ್ಯ 60 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಕಲಂ 379 ಮತ್ತು ಅರಣ್ಯ ಕಾಯ್ದೆ ರೀತಿ ಪ್ರಕರಣ ದಾಖಲು ಮಾಡಲಾಗಿದೆ. ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ – ಮುಖ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ, ಜನರಲ್ಲಿ ಢವಢವ, ವಿಡಿಯೋ ವೈರಲ್