ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 2 SEPTEMBER 2023
SHIKARIPURA : ವೈನ್ ಶಾಪ್ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ (protest) ನಡೆಸಿದರು. ವೈನ್ ಶಾಪ್ ಮುಂದೆ ಮಹಿಳೆಯರು ಧರಣಿ ಮಾಡಿದರು.
ಬಿಳಕಿ ಗ್ರಾಮದಲ್ಲಿನ ವೈನ್ ಶಾಪ್ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ‘ನಮ್ಮ ಊರಿಗೆ ವೈನ್ ಶಾಪ್ನ ಅಗತ್ಯವಿಲ್ಲ’ ಎಂದು ಪ್ರತಿಭಟನಾಕಾರರು ತಿಳಿಸಿದರು. ವೈನ್ ಶಾಪ್ ವಿರೋಧಿಸಿ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ವೈನ್ ಶಾಪ್ ಮುಂಭಾಗ ಧರಣಿ ಮಾಡಲಾಯಿತು.
ಇದನ್ನೂ ಓದಿ – ಭದ್ರಾ ಡ್ಯಾಂನಿಂದ 100 ದಿನ ನೀರು, ಅಚ್ಚುಕಟ್ಟು ರೈತರಿಂದ ಅಹೋರಾತ್ರಿ ಧರಣಿ, ರೈತರ ಆಗ್ರಹವೇನು?
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅವರು ಪ್ರತಿಭಟನಾಕಾರರ ಮನವಿ ಆಲಿಸಿದರು. ಅಲ್ಲದೆ ಮದ್ಯದ ಅಂಗಡಿಗೆ ಬೀಗ ಹಾಕಿಸಿದರು. ಬಿಳಕಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಸಭೆಯಲ್ಲಿಯು ವೈನ್ ಶಾಪ್ ಬಂದ್ ಮಾಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.
LATEST NEWS
- ಶಿವಮೊಗ್ಗದ ಡೇಂಜರ್ ಹಂಪ್ಗಳಿಗೆ 24 ಗಂಟೆಯ ಗಡುವು, ಬೈಕ್ನಲ್ಲಿ ಕಮಿಷನರ್ ಸಿಟಿ ರೌಂಡ್ಸ್

- ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ

- ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್

- ಕೋಟೆ ಮಾರಿಕಾಂಬೆಗೆ 1 ಕೆಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ

- ಫುಡ್ ಕೋರ್ಟ್ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು






